ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಸೋಮವಾರ ಕಾಡು ಹಂದಿಗಳು ಹಾಗೂ ಸಾಕು ಹಂದಿಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಪಶು ಸಂಗೋಪನಾ, ಅರಣ್ಯ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಅಧಿಕಾರಿಗಳ ತುರ್ತು ಸಭೆ ನಡೆಯಿತು. 
ಉಡುಪಿ

ಹಂದಿಗಳ ಸಾವಿಗೆ ಬೇಡ ಆತಂಕ

ಕುಂದಾಪುರ: ಬೈಂದೂರು ಕ್ಷೇತ್ರದ ವಂಡ್ಸೆ, ಬೈಂದೂರು ಹೋಬಳಿಯ ಕೆಲವು ಗ್ರಾಮಗಳಲ್ಲಿ ಕಳೆದ 15-20 ದಿನಗಳಿಂದ ಕಾಡು ಹಂದಿ, ಈಗ ಸಾಕು ಹಂದಿಗಳು ಸಾಯುತ್ತಿವೆ. ಯಾಕೆ ಸಾಯುತ್ತಿವೆ ಎಂಬುದು ವರದಿ ಬಂದ ಬಳಿಕವಷ್ಟೇ ತಿಳಿಯಬಹುದು. ಆದರೆ ಇದರಿಂದ ಮನುಷ್ಯರಿಗೆ ಆಗಲಿ ಅಥವಾ ಬೇರೆ ಪ್ರಾಣಿಗಳಿಗೆ ಯಾವುದೇ ರೀತಿಯಲ್ಲೂ ಹರಡುವುದಿಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಆತಂಕ ಬೇಡ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದರು.
ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಸೋಮವಾರ ಕಾಡು ಹಂದಿಗಳು ಹಾಗೂ ಸಾಕು ಹಂದಿಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಪಶು ಸಂಗೋಪನಾ, ಅರಣ್ಯ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಂದಾಪುರ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಅರುಣ್ ಕುಮಾರ್ ಹೆಗ್ಡೆ ಮಾತನಾಡಿ, ಮೃತಪಟ್ಟ 2 ಕಾಡು ಹಂದಿ ಹಾಗೂ 1 ಸಾಕು ಹಂದಿಗಳ ಸ್ಯಾಂಪಲ್ ಸಂಗ್ರಹಿಸಿ, ಲ್ಯಾಬ್‌ಗೆ ಕಳುಹಿಸಲಾಗಿದೆ. ವರದಿ ಇನ್ನೆರಡು ದಿನಗಳಲ್ಲಿ ಬರಬಹುದು. ಆ ಬಳಿಕವಷ್ಟೇ ಹಂದಿಗಳ ಸಾವಿನ ನಿಖರ ಕಾರಣ ತಿಳಿಯಬಹುದು.
ಹಂದಿಗಳಲ್ಲಿ ಪ್ರಮುಖವಾಗಿ ಆಫ್ರಿಕನ್ ಫೀವರ್ ಹಾಗೂ ಕ್ಲಾಸಿಕಲ್ ಫೀವರ್ ಈ ಎರಡು ರೀತಿಯ ರೋಗ ಸಾವಾನ್ಯವಾಗಿ ಬರುತ್ತವೆ. ಇವು ಹಂದಿಗಳಿಂದ ಹಂದಿಗಳಿಗೆ ವಾತ್ರ ಹರಡುವುದು. ಮನುಷ್ಯರು ಅಥವಾ ಬೇರೆ ಯಾವ ಪ್ರಾಣಿಗಳಿಗೂ ಹರಡಲ್ಲ. ಸಾಕು ಹಂದಿ ಸತ್ತ ಮನೆಯವರನ್ನೂ ತಪಾಸಣೆ ನಡೆಸಿದ್ದೇವೆ. ಯಾವುದೇ ರೋಗ ಲಕ್ಷಣವಿಲ್ಲ, ಹಾಗಾಗಿ ಭಯ ಬೇಡ ಎಂದರು.
ಕುಂದಾಪುರ ವಲಯ ಅರಣ್ಯಾಧಿಕಾರಿ ರಾವೇಂದ್ರ ನಾಯ್ಕ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇವಾನಂದ್ ವಾತನಾಡಿದರು. ಇಲಾಖೆಗಳ ಅಧಿಕಾರಿಗಳು, ವಿವಿಧ ಗ್ರಾ.ಪಂ.ಗಳ ಆಡಳಿತಾಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.
* ೆಟೋ: 14_ಜಿಎಎನ್‌_01_ಜುಲೈ
ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಸೋಮವಾರ ಕಾಡು ಹಂದಿಗಳು ಹಾಗೂ ಸಾಕು ಹಂದಿಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಪಶು ಸಂಗೋಪನಾ, ಅರಣ್ಯ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಅಧಿಕಾರಿಗಳ ತುರ್ತು ಸಭೆ ನಡೆಯಿತು.