ಬಿ.ಸಿ.ರೋಡ್ ಮೆಸ್ಕಾಂ ವಿಭಾಗ ಕಚೇರಿಯಲ್ಲಿ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಅಹವಾಲು ಸಲ್ಲಿಸಿದರು. ಬಂಟ್ವಾಳ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ನಾಯಕ್, ಕೃಷ್ಣರಾಜ್, ನಾರಾಯಣ ಭಟ್ ಮತ್ತಿತರರು ಇದ್ದರು. 
ಉಡುಪಿ

ವಿದ್ಯುತ್ ಅವಘಡದಲ್ಲಿ ಮತೃಪಟ್ಟವರಿಗೆ ಸಿಗದ ಪರಿಹಾರ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಏಳು ತಿಂಗಳ ಹಿಂದೆ ವಿದ್ಯುತ್ ಕಾಮಗಾರಿಯ ಕೆಲಸ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟ ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದ ಕಾವಳಕಟ್ಟೆ ನಿವಾಸಿ ಅಕ್ಬರ್ ಆಲಿ ಅವರ ಕುಟುಂಬಕ್ಕೆ ಸರ್ಕಾರ, ಮೆಸ್ಕಾಂ ಅಥವಾ ಯಾವುದೇ ವಿಭಾಗವಾಗಲೀ ಈವರೆಗೆ ಒಂದು ರೂಪಾಯಿ ಕೂಡ ಪರಿಹಾರ ನೀಡಿಲ್ಲ. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಪಾಲಕರು ಕಂಗಾಲಾಗಿದ್ದಾರೆ ಎಂದು ಜಿಪಂ ವಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಆರೋಪಿಸಿದರು.
ಬಂಟ್ವಾಳ 1 ಮತ್ತು ಬಂಟ್ವಾಳ 2 ಉಪವಿಭಾಗಗಳಿಗೆ ಸಂಬಂಧಿಸಿ ಬಿ.ಸಿ.ರೋಡ್‌ನ ಮೆಸ್ಕಾಂ ವಿಭಾಗ ಕಚೇರಿಯಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಕೂಲಿ ಕಾರ್ಮಿಕರಾಗಿರುವ ಅಕ್ಬರ್ ಆಲಿ ಮನೆಯವರು ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ. ಇತ್ತ ಮಗನೂ ಇಲ್ಲ, ಪರಿಹಾರವೂ ಇಲ್ಲ ಎಂಬಂತಾಗಿದೆ. ಇಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ವರದಿ ತಡವಾಗಿ ಬಂದಿದೆ. ಆದರೆ ವಾನವೀಯತೆ ದೃಷ್ಟಿಯಿಂದ ಈ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಉತ್ತರಿಸಿ, ಸರ್ಕಾರದಿಂದಲೇ ನೇಮಕವಾದ ಇಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ಅವರ ವರದಿಯ ಪ್ರಕಾರವೇ ನಾವು ಕ್ರಮ ಕೈಗೊಳ್ಳುತ್ತೇವೆ. ಆಕ್ಷೇಪಣೆ ಇದ್ದರೆ ಉಜಿರೆ ಉಪವಿಭಾಗದಲ್ಲಿ ದೂರು ಅರ್ಜಿ ನೀಡಬಹುದು. ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಗುತ್ತಿಗೆದಾರರರೊಬ್ಬರು ಮಾತನಾಡಿ, ಈ ಪ್ರಕರಣದಲ್ಲಿ ಗುತ್ತಿಗೆದಾರರು ಪರಿಹಾರ ನೀಡಲು ಮುಂದಾಗಿದ್ದರು. ಆದರೆ ಕುಟುಂಬ ನಿರಾಕರಿಸಿತ್ತು ಎಂದರು.
ವಿದ್ಯುತ್ ಪರಿವರ್ತಕ ಕಂಬಗಳಿಗೆ ಬಳ್ಳಿಗಳು ಸುತ್ತಿಕೊಂಡಿದ್ದು ತೆರವು ಮಾಡಿಲ್ಲ. ಅಪಾಯಕಾರಿಯಾಗಿರುವ ಇದನ್ನು ತಕ್ಷಣವೇ ತೆಗೆಯಬೇಕು ಎಂದು ಗುತ್ತಿಗೆದಾರ ಲಕ್ಷ್ಮೀನಾರಾಯಣ ಸಭೆಯ ಗಮನಕ್ಕೆ ತಂದರು.
ಅವ್ಟಾಡಿಯಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳನ್ನು ತೆರವು ವಾಡಬೇಕು, ನಲ್ಕೆವಾರ್ ಕೆರೆಯ ಬಳಿ ಅಪಾಯಕಾರಿಯಾಗಿರುವ ಮರ ತೆರವು ವಾಡಬೇಕು. ಇರ್ವತ್ತೂರು ಗ್ರಾಪಂ ವ್ಯಾಪ್ತಿಗೆ ಹೊಸ ಟಿಸಿ ಅಳವಡಿಸಬೇಕು, ನಾವೂರು ಬಡಗುಂಡಿಯಲ್ಲಿ ವೋಲ್ಟೇಜ್ ಸಮಸ್ಯೆಯನ್ನು ಸರಿಪಡಿಸಬೇಕು. ಕಾವಳಕಟ್ಟೆಯಲ್ಲಿ ವಿದ್ಯುತ್ ಕಂಬವೊಂದು ರಸ್ತೆ ಬದಿ ಅಪಾಯಕಾರಿಯಾಗಿದ್ದು ವಾಹನಗಳು ಇದಕ್ಕೆ ತಾಗಿಕೊಂಡೇ ಹೋಗುತ್ತವೆ. ಶೀಘ್ರವೇ ಕಂಬವನ್ನು ಸ್ಥಳಾಂತರಿಸಬೇಕು ಎಂದು ಗ್ರಾಹಕರು ಸಭೆಯ ಗಮನಕ್ಕೆ ತಂದರು.
ಬಂಟ್ವಾಳ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ನಾಯಕ್, ಬಂಟ್ವಾಳ ಉಪವಿಭಾಗ 1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಭಟ್, ಬಂಟ್ವಾಳ ಉಪವಿಭಾಗ 2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಬ್ರಹ್ಮಣ್ಯ ಪ್ರಸಾದ್ ಇದ್ದರು.

ಬೀದಿದೀಪಕ್ಕೆ ನೇರ ಸಂಪರ್ಕ ಕ್ರಮ ಅಗತ್ಯ

ಗೃಹಜ್ಯೋತಿ ಸೌಲಭ್ಯ ಪಡೆಯುವ ಕೆಲವು ಕುಟುಂಬಗಳು ಬೀದಿದೀಪ, ಪ್ಯಾಸೇಜ್‌ಗೆ ನೇರ ಸಂಪರ್ಕ ಪಡೆದುಕೊಂಡಿದ್ದಾರೆ. ಇದರ ವಿರುದ್ಧ ನಿಗಾ ವಹಿಸಬೇಕು ಹಾಗೂ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು, ಲೈನ್‌ಮನ್‌ಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬರಬೇಕು ಎಂದು ಗುತ್ತಿಗೆದಾರ ಲಕ್ಷ್ಮೀನಾರಾಯಣ ಹೇಳಿದರು.

ಗೃಹಜ್ಯೋತಿ ಪರಿಶೀಲನೆಗೆ ಮನೆ ಮನೆಗೆ ಲೈನ್‌ಮನ್ ಆ.31ರವರೆಗೆ ಬರಲಿದ್ದಾರೆ. ಬಂಟ್ವಾಳದಲ್ಲಿ ಶೇ.60 ಸರ್ವೇ ನಡೆದಿದೆ. ಒಂದು ವೇಳೆ ನೆಟ್‌ವರ್ಕ್ ಇಲ್ಲದ ಮನೆಯವರನ್ನು ನೆಟ್‌ವರ್ಕ್ ಇರುವೆಡೆಗೆ ಕರೆಸಿಕೊಂಡು ಮಾಹಿತಿ ಅಪ್ಲೋಡ್ ವಾಡಲಾಗುತ್ತದೆ. ಯಾರಿಗೂ ಗೊಂದಲ, ಭಯ ಬೇಡ.

— ಕೃಷ್ಣರಾಜ್, ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್, ಮೆಸ್ಕಾಂ