ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರ ಆಯೋಜಿಸಿದ್ದ ಎಸ್‌ಡಿಎಂ ಝೇಂಕಾರ ಉತ್ಸವದಲ್ಲಿ ಸಮಗ್ರ ಪ್ರಶಸ್ತಿ ಪಡೆದ ನಿಟ್ಟೆ ಇನ್‌ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜು ವಿದ್ಯಾರ್ಥಿಗಳು.
ಉಜಿರೆ: ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರ ಆಯೋಜಿಸಿದ್ದ ಎರಡು ದಿನಗಳ ಝೇಂಕಾರ- 2026 ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಮಂಗಳೂರಿನ ನಿಟ್ಟೆ ಇನ್‌ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜು ತಂಡ ತನ್ನದಾಗಿಸಿಕೊಂಡಿದೆ. ಮಂಗಳೂರಿನ ಯೆನಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.
ಸಮಾರೋಪದಲ್ಲಿ ಎಸ್‌ಡಿಎಂ ಸ್ನಾತಕೋತ್ತರ ವಿಭಾಗದ ಡೀನ್ ಸೌಮ್ಯಾ ಬಿ.ಪಿ., ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ, ಎಸ್‌ಡಿಎಂ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ., ಝೇಂಕಾರ ಉತ್ಸವ ಸಂಯೋಜಕರಾದ ಡಾ.ರವಿಶಂಕರ, ಡಾ.ಪ್ರಿಯಾಕುಮಾರಿ, ಪ್ರವೀಣ ಮತ್ತು ಪ್ರದೀಪ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.
ವಿವಿಧ ಸ್ಪರ್ಧೆಯ ಫಲಿತಾಂಶ
ಮಿಸ್ಟರ್ ಝೇಂಕಾರ-ಮಂಗಳೂರಿನ ನಿಟ್ಟೆ ಇನ್‌ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜಿನ ಅಜಯ ಪಾಂಡಿ, ಮಿಸ್ ಝೇಂಕಾರ- ಮಂಗಳೂರಿನ ಯೆನೆಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಜ್ಯೋತಿ ಚಂದನಾ, ಮಾಕ್ ಪ್ರೆಸ್‌ನಲ್ಲಿ ನಿಟ್ಟೆ ಇನ್‌ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜು(ಪ್ರ), ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜು(ದ್ವಿ), ಸೈಕಾಲಜಿ ಮಾಯ್ಸಸ್ಟ್ರೋ- ಮೈಸೂರಿನ ಎಸ್.ಬಿ.ಆರ್.ಆರ್. ಮಹಾಜನ ಕಾಲೇಜು(ಪ್ರ), ಮಂಗಳೂರಿನ ಡಾ.ಪಿ.ದಯಾನಂದ ಕಾಲೇಜು (ದ್ವಿ), ದ ರೈಟರ್ಸ್ ರಿಲೆ- ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು(ಪ್ರ), ಮಂಗಳೂರಿನ ಯೆನೆಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್(ದ್ವಿ), ಮೈಂಡ್ ಕ್ರಾಫ್ಟ್- (ವಿಜ್ಞಾನ ಕ್ವಿಜ್) ಹಾಸನದ ಸರ್ಕಾರಿ ವಿಜ್ಞಾನ ಕಾಲೇಜು (ಪ್ರ), ಮೂಡುಬಿದಿರೆ ಆಳ್ವಾಸ್ ಕಾಲೇಜು(ದ್ವಿ), ಟ್ರೆಜರ್ ಹಂಟ್- ಉಡುಪಿ ಪೂರ್ಣಪ್ರಜ್ಞಾ ಕಾಲೇಜು(ಪ್ರ), ಪುತ್ತೂರು ವಿವೇಕಾನಂದ ಕಾಲೇಜು(ದ್ವಿ), ಫ್ಯೂಜಿಯಾಂಕ್ಸ್- ಮೈಸೂರಿನ ಎಸ್.ಬಿ.ಆರ್.ಆರ್. ಮಹಾಜನ ಕಾಲೇಜು(ಪ್ರ), ಉಜಿರೆ ಎಸ್‌ಡಿಎಂ ಕಾಲೇಜು(ದ್ವಿ), ಎಮಿನಿಶಿಯಾ (ಮಾರ್ಕೆಟಿಂಗ್)- ಮಂಗಳೂರು ಎಸ್‌ಡಿಎಂ ಲಾ ಕಾಲೇಜು (ಪ್ರ), ಪುತ್ತೂರು ವಿವೇಕಾನಂದ ಕಾಲೇಜು (ದ್ವಿ), ಯುವೆಕ್ಸಾ (ಹ್ಯೂಮನ್ ರಿಸೋರ್ಸ್)- ಮಂಗಳೂರು ಎಸ್‌ಡಿಎಂ ಲಾ ಕಾಲೇಜು(ಪ್ರ), ಉಜಿರೆ ಎಸ್‌ಡಿಎಂ ಕಾಲೇಜು(ದ್ವಿ), ಪ್ಲೆನೆಕ್ಸಾ- (ಬೆಸ್ಟ್ ಮ್ಯಾನೇಜ್‌ಮೆಂಟ್ ಟೀಮ್) ಪುತ್ತೂರು ವಿವೇಕಾನಂದ ಕಾಲೇಜು(ಪ್ರ), ಮೈಸೂರಿನ ಎಸ್.ಬಿ.ಆರ್.ಆರ್. ಮಹಾಜನ ಕಾಲೇಜು(ದ್ವಿ), ಸಮನ್ವಯ (ಐಸ್ ಬ್ರೇಕರ್)- ನಿಟ್ಟೆ ಇನ್‌ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜು(ಪ್ರ), ಮಂಗಳೂರು ಎಸ್‌ಡಿಎಂ ಲಾ ಕಾಲೇಜು(ದ್ವಿ), ಗ್ರೂಪ್ ಡ್ಯಾನ್ಸ್- ಮೈಸೂರು ಮಹಾಜನ ಕಾಲೇಜು (ಪ್ರ), ನಾರಾವಿ ಸಂತ ಅಂತೋನಿ ಕಾಲೇಜ್ ಆಫ್ ಕಾಮರ್ಸ್ (ದ್ವಿ), ಫ್ಯಾಶನ್ ಶೋ- ನಿಟ್ಟೆ ಇನ್‌ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜು(ಪ್ರ), ಯೆನೆಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ (ದ್ವಿ), ಸ್ಪಾಟ್ ಫೋಟೋಗ್ರಫಿ- ಉಡುಪಿ ಪೂರ್ಣಪ್ರಜ್ಞಾ ಕಾಲೇಜು(ಪ್ರ), ಪುತ್ತೂರು ವಿವೇಕಾನಂದ ಕಾಲೇಜು(ದ್ವಿ), ರೀಲ್ ಮೇಕಿಂಗ್: ಯೆನೆಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್(ಪ್ರ), ಬೆಳ್ತಂಗಡಿ ಗುರುದೇವ ಪ್ರಥಮ ದರ್ಜೆ ಕಾಲೇಜು (ದ್ವಿ), ಗಲ್ಲಿ ಕ್ರಿಕೆಟ್: ಬೆಳ್ತಂಗಡಿ ಗುರುದೇವ ಪ್ರಥಮ ದರ್ಜೆ ಕಾಲೇಜು ತಂಡ-ಎ(ಪ್ರ), ಗುರುದೇವ ಪ್ರಥಮ ದರ್ಜೆ ಕಾಲೇಜಿನ ತಂಡ-ಬಿ(ದ್ವಿ) ಬಹುಮಾನ ಗಳಿಸಿತು.