ಕುಂಬಳೆ: ಪೆರ್ವಾಡ್ ಬೀಚ್‌ನ ಬಳಿ ಇರುವ ಕೆಲವು ಮನೆಗಳಿಗೆ ರಾತ್ರಿ ವೇಳೆ ಕಿಡಿಗೇಡಿಗಳು ಬಂದು ಇಣುಕಿ ಕಿರುಕುಳ ನೀಡುತ್ತಿರುವುದಾಗಿ ಸ್ಥಳೀಯರು ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬೀಚ್‌ನಲ್ಲಿ ಮದ್ಯಪಾನ ಮಾಡಿ ರಾತ್ರಿಯಿಡೀ ಮೋಜು ಮಾಡುವ ಕೆಲವರು ರಾತ್ರಿ ಮನೆಗಳಿಗೆ ಬಂದು ಇಣುಕುತ್ತಿದ್ದು ಮಹಿಳೆಯರರಲ್ಲಿ ಭಯ ಹುಟ್ಟಿಸಿದೆ. ಇಲ್ಲಿನ ಬಹುತೇಕ ಮನೆಗಳ ಗಂಡಸರು ಉದ್ಯೋಗ ನಿಮಿತ್ತ ಬೇರೆ ರಾಜ್ಯ ಮತ್ತು ವಿದೇಶಗಳಲ್ಲಿದ್ದು ಅಂತಹ ಹೆಂಗಸರು, ಮಕ್ಕಳು ಮಾತ್ರ ಇರುವ ಮನೆಗಳನ್ನೇ ಕಿಡಿಗೇಡಿಗಳು ಗುರಿಯಾಗಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ರಾತ್ರಿ ಗಸ್ತು ಹೆಚ್ಚಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.