ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಅಭಿನಂದಿಸಿತು. ಪ್ರಶಾಂತ್ ಜತ್ತನ್ನ, ಡೆನಿಸ್ ಡೆಸಾ, ಐವನ್ ಸೋನ್ಸ್, ಕಿಶೋರಕುಮಾರ್, ಸಂತೋಷ್, ಪ್ರವೀಣ್ ಮಾಬೆನ್, ಕ್ರಿಸ್ಟೋಫರ್ ಇತರರಿದ್ದರು.
* ಬಿಷಪ್ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಭರವಸೆ
* ಯುನೈಟೆಡ್ ಕ್ರಿಶ್ಚಿಯನ್ ಫೋರಮ್ನಿಂದ ಸನ್ಮಾನ
ಉಡುಪಿ: ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರಿಗೆ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಉಡುಪಿ ಜಿಲ್ಲೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ವಿವಿಧ ಸಭೆಗಳ ಸಭಾಪಾಲಕರು ಮತ್ತು ಧರ್ಮಾಧ್ಯಕ್ಷರೊಂದಿಗೆ ಚರ್ಚಿಸಿದ ನೂತನ ಧರ್ಮಾಧ್ಯಕ್ಷರು, ಜಿಲ್ಲೆಯಲ್ಲಿ ಕ್ರೈಸ್ತ ಏಕತೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಯುನೈಟೆಡ್ ಕ್ರಿಶ್ಚಿಯನ್ ಫೋರಮ್ನ ಉಪಾಧ್ಯಕ್ಷ ಪ್ರಶಾಂತ್ ಜತ್ತನ್ನ, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಸಿಎಸ್ಐ ಸದರ್ನ್ ಡಯಾಸಿಸ್ನ ಕೋಶಾಧಿಕಾರಿ ವಂ.ಐವನ್ ಸೋನ್ಸ್, ವಲಯ ಸಭಾಪಾಲಕ ವಂ.ಕಿಶೋರಕುಮಾರ್, ಯುಬಿಎಂ ಚರ್ಚ್ ಮಣಿಪಾಲ ಸಭಾಪಾಲಕ ವಂ.ಸಂತೋಷ್, ಸಿಎಸ್ಐ ಮಣಿಪುರ ಚರ್ಚ್ನ ವಂ.ಪ್ರವೀಣ್ ಮಾಬೆನ್, ಯುಬಿಎಂಸಿ ಕಾರ್ಯದರ್ಶಿ ಕ್ರಿಸ್ಟೋಫರ್, ಫುಲ್ ಗೊಸ್ಪಲ್ ಸಭೆಯ ಪಾಸ್ಟರ್ ಕೆ.ವಿ. ಪಾವ್ಲ್, ಅಶೋಕ್, ಸಿರೋ ಮಲಂಕರ ಬೈಂದೂರಿನ ವಂ.ಡೇವಿಡ್, ವಂ.ಫಿಲಿಪ್, ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಐಕ್ಯತಾ ಆಯೋಗದ ನಿರ್ದೇಶಕ ವಂ.ಲಿಯೋ ಪ್ರವೀಣ್ ಹಾಗೂ ವಿವಿಧ ಸಭೆಗಳ ಮುಖಂಡರು ಉಪಸ್ಥಿತರಿದ್ದರು.