ಉಡುಪಿಯ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್​ ಫ್ರೆಂಡ್ಸ್​ ತಂಡದ ನೂತನ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮುರಳೀಧರ್​ ನಕ್ಷತ್ರಿ,ದಿಲೀಪ್​ ರಾಜ್​ ಹೆಗ್ಡೆ, ರಾಮದಾಸ್​ ಹೆಗ್ಡೆ, ಜಯರಾಜ್​ ಹೆಗ್ಡೆ, ದಿನೇಶ್​ ಹೆಗ್ಡೆ ಆತ್ರಾಡಿ, ಗಣೇಶ್​ ಪಾಟೀಲ್​, ಭಾಸ್ಕರ್​ ದೇವಾಡಿಗ ಇತರರಿದ್ದರು. 
ಉಡುಪಿ

ವಾಲಿಬಾಲ್​ ಫ್ರೆಂಡ್ಸ್​ ಪರ್ಕಳ ತಂಡದ ಲೋಗೋ ಬಿಡುಗಡೆ

* ಅಧಿಕೃತವಾಗಿ ನೋಂದಾಯಿಸುವ ಹಿನ್ನೆಲೆ

ಉಡುಪಿ: ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್​ ಫ್ರೆಂಡ್ಸ್​ ತಂಡದ ನೂತನ ಲೋಗೋ ಬಿಡುಗಡೆ ಕಾರ್ಯಕ್ರಮ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ತಂಡವು ಹಲವು ವರ್ಷದಿಂದ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ದೇವಸ್ಥಾನದ ವಾರ್ಷಿಕ ಜಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಹಕಾರ ನೀಡುತ್ತಿದ್ದಾರೆ.

ತಂಡವನ್ನು ಅಧಿಕೃತವಾಗಿ ನೋಂದಾಯಿಸುವ ಹಿನ್ನೆಲೆಯಲ್ಲಿ ನೂತನ ಲೋಗೋ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುರಳೀಧರ್​ ನಕ್ಷತ್ರಿ,ದಿಲೀಪ್​ ರಾಜ್​ ಹೆಗ್ಡೆ, ರಾಮದಾಸ್​ ಹೆಗ್ಡೆ, ಜಯರಾಜ್​ ಹೆಗ್ಡೆ, ದಿನೇಶ್​ ಹೆಗ್ಡೆ ಆತ್ರಾಡಿ, ಗಣೇಶ್​ ಪಾಟೀಲ್​, ಭಾಸ್ಕರ್​ ದೇವಾಡಿಗ, ಪದ್ಮನಾಭ ಬಾಯರಿ, ಸುಖಾನಂದ್​ ಶೆಟ್ಟಿಗಾರ್​, ಕೀರ್ತಿ ಕುಮಾರ್​, ಸುಧೀರ್​ ಶೆಟ್ಟಿ, ಸುಧೀರ್​ ಶೆಟ್ಟಿಗಾರ್​ ಹಾಗೂ ವಾಲಿಬಾಲ್​ ಫ್ರೆಂಡ್ಸ್​ನ ಸರ್ವಸದಸ್ಯರು ಉಪಸ್ಥಿತರಿದ್ದರು.