ಲಾಯಿಲದಲ್ಲಿ ಗ್ರಾಮದ ಗುರಿಂಗಾನದಲ್ಲಿ ಸ್ಥಳೀಯರಿಗೆ ನೆರವಾದ ಎನ್‌ಡಿಆರ್‌ಎಫ್ ತಂಡ.  
ಉಡುಪಿ

ಎನ್‌ಡಿಆರ್‌ಎಫ್ ತಂಡ ಆಗಮನ

ಬೆಳ್ತಂಗಡಿ: ತಾಲೂಕಿನಲ್ಲಿ ಮಳೆಯಿಂದ ಉಂಟಾಗಬಹುದಾದ ಅಪಾಯಗಳಿಗೆ ಸಕಾಲಕ್ಕೆ ನೆರವು ನೀಡಲು ಎನ್‌ಡಿಆರ್‌ಎಫ್ ತಂಡ ಬೆಳ್ತಂಗಡಿಗೆ ಆಗಮಿಸಿದೆ. ಸುಮಾರು 20 ಮಂದಿಯ ಈ ತಂಡ ಅಗತ್ಯ ಸಲಕರಣೆಗಳನ್ನು ಹೊಂದಿದ್ದು, ಅಪಾಯದ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸಲಿದೆ. ಲಾಯಿಲ ಗ್ರಾಮ ಗುರಿಂಗಾನದ ಎಂಟು ಹಾಗೂ ಪುತ್ರಬೈಲಿನ 6 ಕುಟುಂಬಗಳನ್ನು ಎನ್‌ಡಿಆರ್‌ಎಫ್ ತಂಡ ಸ್ಥಳಾಂತರಿಸಿತು.

ಬೆಳ್ತಂಗಡಿಯ ಸೋಮಾವತಿ ನದಿ ಉಕ್ಕಿ ಹರಿದ ಪರಿಣಾಮ ಈ ಪರಿಸರದ ಕೆಲವು ಮನೆಗಳಿಗೆ ನೀರು ನುಗ್ಗಿ ಅಪಾಯದ ಸ್ಥಿತಿ ಉಂಟಾಗಿತ್ತು. ತಹಸೀಲ್ದಾರ್, ಇಒ ಸಹಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನದಿ ಬದಿಯ ನಿವಾಸಿಗಳನ್ನು ಸ್ಥಳಾಂತರಿಸಿದರು. ಸೋಮಾವತಿ ನದಿಯಲ್ಲಿ 2019ರ ಪ್ರವಾಹದ ವೇಳೆಯೂ ಇಷ್ಟೊಂದು ನೀರು ಬಂದಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಎನ್‌ಡಿಆರ್‌ಎಫ್ ತಂಡ, ಪೊಲೀಸ್, ಅಗ್ನಿಶಾಮಕ, ಕಂದಾಯ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಇತರ ಸಂಘ-ಸಂಸ್ಥೆಗಳು ಸನ್ನದ್ಧವಾಗಿವೆ.