ಉಡುಪಿ ಹರಿಖಂಡಿಗೆಯ ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಡಾ. ಸತ್ಯನಾರಾಯಣ ಬಿ. ಉದ್ಘಾಟಿಸಿದರು. ಪ್ರಸಾದ ಮಲ್ಯ, ಸುರೇಶ ಗುರೂಜಿ, ಡಾ. ಅಪರ್ಣಾ ಸುರೇಂದ್ರ ಇದ್ದರು. 
ಉಡುಪಿ

ಮನುಕುಲಕ್ಕೆ ದೊರೆತ ವರದಾನ ಪ್ರಕೃತಿ ಚಿಕಿತ್ಸೆ

* ಪ್ರೊ. ಡಾ. ಸತ್ಯನಾರಾಯಣ ಬಿ. ಅಭಿಪ್ರಾಯ

* ಆರೋಗ್ಯ ತಪಾಸಣಾ ಉಚಿತ ಶಿಬಿರ

ಉಡುಪಿ: ಪ್ರಕೃತಿ ಚಿಕಿತ್ಸೆಯು ಭಾರತದ ಪ್ರಾಚಿನ ವೈದ್ಯಕೀಯ ಪದ್ಧತಿಯಾಗಿದೆ. ಇತ್ತೀಚೆಗೆ ಈ ವಿಧಾನವು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಪ್ರಕೃತಿ ಚಿಕಿತ್ಸೆ ಮತ್ತು ಆಯುಷ್​ ವೈದ್ಯಕೀಯ ಪದ್ಧತಿ ಮನುಕುಲಕ್ಕೆ ದೊರೆತ ವರದಾನವಾಗಿದೆ ಎಂದು ಮುನಿಯಾಲು ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ. ತಿಳಿಸಿದರು.

ಉಡುಪಿ ಹರಿಖಂಡಿಗೆಯ ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆ ವತಿಯಿಂದ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ನಿಮಿತ್ತ ಬುಧವಾರ (ನ.18) ಆಯೋಜಿಸಿದ್ದ ವೈದ್ಯಕೀಯ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬೈರಂಪಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಸಾದ ಮಲ್ಯ ಮಾತನಾಡಿ, ಗ್ರಾಮೀಣ ಜನರ ಆರೋಗ್ಯ ರಕ್ಷಣೆಯ ಕಾಳಜಿಯಿಂದ ಆಯೋಜಿಸಿರುವ ಈ ಶಿಬಿರ ಮಹತ್ವದ್ದಾಗಿದೆ. ಮುಂದಿನ ವರ್ಷಗಳಲ್ಲೂ ಸಹ ಇಂತಹ ಶಿಬಿರದಿಂದ ಇನ್ನೂ ಹೆಚ್ಚಿನ ಜನರಿಗೆ ಪ್ರಯೋಜನ ಲಭಿಸಲಿ ಎಂದರು.

ಹರಿಖಂಡಿಗೆಯ ಮಹಾಲಸಾ ನಾರಾಯಣೀ ದೇವಸ್ಥಾನದ ಧರ್ಮದರ್ಶಿ ಸುರೇಶ ಗುರೂಜಿ ಮಾತನಾಡಿ, ರೋಗ ತಡೆಗಟ್ಟುವಿಕೆಯಲ್ಲಿ ಪ್ರಕೃತಿ ಚಿಕಿತ್ಸಾ ವಿಧಾನಗಳ ಮಹತ್ವ ವಿವರಿಸಿದರು.

ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯ ಪ್ರಾಂಶುಪಾಲೆ ಡಾ. ಅಪರ್ಣಾ ಸುರೇಂದ್ರ ಮಾತನಾಡಿ, ದೈನಂದಿನ ಚಟುವಟಿಕೆಗಳಲ್ಲಿ ಪ್ರಕೃತಿಯೊಂದಿಗೆ ಬೆರೆಯುವುದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ. ರೋಗ ನಿರೋಧಕ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

ಡಾ. ಅನುಪ್ರೀತ ಸ್ವಾಗತಿಸಿದರು. ಡಾ. ಸಂಗೀತಾ ವಂದಿಸಿದರು. ಇಂಟರ್ನ್​ ವೈದ್ಯೆ ಡಾ.

ವಾಸವಿ ಕಾರ್ಯಕ್ರಮ ನಿರೂಪಿಸಿದರು.