ಪೆರಡಾಲ ದೇವಸ್ಥಾನದಲ್ಲಿ ಹಸಿರು ನಮನೋತ್ಸವಕ್ಕೆ ವೆಂಕಟ್ರಮಣ ಭಟ್ ಚಂಬಲ್ತಿಮಾರು ಚಾಲನೆ ನೀಡಿದರು. ಮೊಕ್ತೇಸರರಾದ ಜಗನ್ನಾಥ ರೈ ಪೆರಡಾಲ ಗುತ್ತು, ಸೀತಾರಾಮ ನವಕಾನ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಪ್ರಕೃತಿ ಸಂರಕ್ಷಣೆ ನಮ್ಮ ಕರ್ತವ್ಯ

ಇಂದಿರಾ ಎನ್ ಕೆ
ಬದಿಯಡ್ಕ: ದೇವರ ಸೇವೆ ಜತೆಗೆ ಪ್ರಕೃತಿ ಸೇವೆ ಮಾಡುವುದು ನಮ್ಮ ಕರ್ತವ್ಯ. ಈ ಹಸಿರು ನಮನೋತ್ಸವ ಪ್ರತಿ ವರ್ಷ ಆಚರಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವೆಂಕಟ್ರಮಣ ಭಟ್ ಚಂಬಲ್ತಿಮಾರು ಕರೆ ನೀಡಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಶ್ರೀ ಉದನೇಶ್ವರ ಹಸಿರು ನಮನೋತ್ಸವ ಎಂಬ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೊಕ್ತೇಸರರಾದ ಜಗನ್ನಾಥ ರೈ ಪೆರಡಾಲ ಗುತ್ತು, ಸೀತಾರಾಮ ನವಕಾನ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲ ಗುತ್ತು, ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ, ಉಪಾಧ್ಯಕ್ಷ ಜಯಪ್ರಕಾಶ ಶೆಟ್ಟಿ, ಜತೆ ಕಾರ್ಯದರ್ಶಿ ಭಾಸ್ಕರ, ಡಾ.ಶ್ರೀಶ ಕುಮಾರ್, ಸದಾಶಿವ ಪೆರಡಾಲ, ಪುಟ್ಟ ನಾಯ್ಕ, ಮಾತೃ ಸಮಿತಿ ಅಧ್ಯಕ್ಷೆ ವಿನಯ ಜೆ.ರೈ ಉಪಸ್ಥಿತರಿದ್ದರು. ದೇವಸ್ಥಾನದ ಆವರಣದಲ್ಲಿ ಸಮಿತಿ ಪದಾಧಿಕಾರಿಗಳು, ಊರಿನ ಹಿರಿಯರು ಹಾಗೂ ಯುವಕರು ಸೇರಿ ಸಾಮೂಹಿಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.