ವೃಕ್ಷಾಂಕುರ ರಕ್ಷಾ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರ ಸತೀಶ್ ಭಟ್, ಅರ್ಚಕ ಉಮೇಶ್ ಭಟ್, ಕ್ಷೇತ್ರದ ಉಪಾಧ್ಯಕ್ಷ ಹರಿಶ್ಚಂದ್ರ, ಪ್ರತಿಷ್ಠಾನದ ಗೌರವಾಧ್ಯಕ್ಷ ರಾಕೇಶ್ ಕುಮಾರ್ ಮತ್ತಿತರರು ಭಾಗವಹಿಸಿದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಅಭಿವೃದ್ಧಿ ಹೆಸರಲ್ಲಿ ಮರಗಳ ನಾಶದಿಂದ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿವೆ. ಪ್ರಕೃತಿಯನ್ನು ಸಮಾತೋಲನದಲ್ಲಿ ಇರಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಅಧ್ಯಕ್ಷ ಜೀವನ್‌ಕುಮಾರ್ ತೊಕ್ಕೊಟ್ಟು ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದಿಂದ ಉಳ್ಳಾಲ ಬೈದರಪಾಲ್ ಶ್ರೀ ಮಹಾಗಣಪತಿ ದೇವಸ್ಥಾನ ವಠಾರದಲ್ಲಿ ಭಾನುವಾರ ‘ವೃಕ್ಷಾಂಕುರ ರಕ್ಷಾ-2026’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರ ಸತೀಶ್ ಭಟ್, ಅರ್ಚಕ ಉಮೇಶ್ ಭಟ್, ಕ್ಷೇತ್ರದ ಉಪಾಧ್ಯಕ್ಷ ಹರಿಶ್ಚಂದ್ರ, ಪ್ರತಿಷ್ಠಾನದ ಗೌರವಾಧ್ಯಕ್ಷ ರಾಕೇಶ್ ಕುಮಾರ್, ಉಪಾಧ್ಯಕ್ಷರಾದ ಮಾಧವ ಉಳ್ಳಾಲ್, ದಾಮೋದರ ನಡಾರ್, ಕೋಶಾಧಿಕಾರಿ ಪ್ರಸಾದ್ ಕೊಂಡಾಣ, ವೃಕ್ಷಾಂಕುರ ರಕ್ಷಾ ಸಂಚಾಲಕ ರಾಜೇಂದ್ರ ಸೇವಂತಿಗುಡ್ಡೆ, ಕಾರ್ಯದರ್ಶಿ ದೀಕ್ಷಿತ್ ನಿಸರ್ಗ, ಪ್ರಮುಖರಾದ ನವೀನ್ ಎ.ಕೆ., ಲಕ್ಷ್ಮೀನಾರಾಯಣ, ರಮೇಶ್ ನಡಾರ್, ನಟರಾಜ್ ತೊಕ್ಕೊಟ್ಟು, ಚಂದ್ರಶೇಖರ ಕೊಲ್ಯ, ವಿಶ್ವನಾಥ ಏಲ್ಯಾರ್ ಪದವು, ಸತೀಶ್ ಪೂಜಾರಿ, ಸತ್ಯಪ್ರಸಾದ್ ಕುಂಪಲ, ಬೃಜೇಶ್ ನಾಯರ್, ಸೂರಜ್ ಮಡ್ಯಾರ್, ದಿವಿತ್ ಜೆ.ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೆತೋಡು ಕಾರ್ಯಕ್ರಮ ನಿರೂಪಿಸಿದರು.