ಬಾಲಗೋಕುಲಂ ಉತ್ತರ ಕೇರಳ ರಾಜ್ಯ ವಾರ್ಷಿಕ ಸಮ್ಮೇಳನ ಪ್ರಯುಕ್ತ ಕಾರ್ಯಕರ್ತರ ಅಭ್ಯಾಸವರ್ಗವನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಶ್ರೀಕಷ್ಣನ ವಿಗ್ರಹಕ್ಕೆ ಹಾರಾರ್ಪಣೆ ನೆರವೇರಿಸಿ ಉದ್ಘಾಟಿಸಿದರು. ಎಂ.ರಾಧಾಕೃಷ್ಣನ್, ಎಂ.ಸತ್ಯನ್ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಯುವಸಮುದಾಯವನ್ನು ಸುಸಂಸ್ಕೃತರನ್ನಾಗಿಸುವುದರ ಜತೆಗೆ ರಾಷ್ಟ್ರೀಯ ಚಿಂತನೆ ಬೆಳೆಸುವಲ್ಲಿ ಬಾಲಗೋಕುಲದ ಪಾತ್ರ ಮಹತ್ವದ್ದಾಗಿದೆ. ದೇಶದ ಯುವ ಸಮೂಹ ರಾಷ್ಟ್ರೀಯತೆಯಿಂದ ವಿಮುಖರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ವಿದ್ಯಾನಗರದ ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆಯುತ್ತಿರುವ ಬಾಲಗೋಕುಲಂ ಉತ್ತರ ಕೇರಳ ರಾಜ್ಯ ವಾರ್ಷಿಕ ಸಮ್ಮೇಳನದ ಎರಡನೇ ದಿನವಾದ ಶನಿವಾರ ಕಾರ್ಯಕರ್ತರ ಅಭ್ಯಾಸವರ್ಗ ಉದ್ಘಾಟಿಸಿ ಆಶೀರ್ವಚನ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂದ ಕ್ಷೇತ್ರೀಯ ಕಾರ್ಯವಾಹ ಎಂ.ರಾಧಾಕೃಷ್ಣನ್ ಅವರು ನವ ಯುಗದ ಸಂಟಕ ಎಂಬ ವಿಚಾರದ ಬಗ್ಗೆ ವಾತನಾಡಿದರು. ಉತ್ತರ ಕೇರಳ ಸಮಿತಿ ಅಧ್ಯಕ್ಷ ಎಂ.ಸತ್ಯನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಾಲಗೋಕುಲ ಸಮಿತಿ ಕಾರ್ಯದರ್ಶಿ ಅರವಿಂದ, ರಾಜ್ಯ ಕಾರ್ಯದರ್ಶಿ ಕೆ.ಎನ್.ಸಜಿಕುವಾರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎನ್.ಎಂ.ಸದಾನಂದನ್ ಸ್ವಾಗತಿಸಿದರು. ಕಂದಾಯ ಜಿಲ್ಲಾ ಕಾರ್ಯದರ್ಶಿ ಎಂ.ಟಿ.ವಿದ್ಯಾಧರನ್ ವಂದಿಸಿದರು.