ಮುದ್ದುಕೃಷ್ಣ ಸಾಂಸ್ಕೃತಿಕ ಸ್ಪರ್ಧೆಯನ್ನು ಮಂಜನಾಡಿ ವಿಷ್ಣುಮೂರ್ತಿ ಜನಾರ್ದನ ಭಜನಾ ಮಂಡಳಿ ಅಧ್ಯಕ್ಷ ರವಿ ಮಂಜನಾಡಿ ಉದ್ಘಾಟಿಸಿದರು. ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ್ ತೊಕ್ಕೊಟ್ಟು, ಉಪಾಧ್ಯಕ್ಷ ಸತೀಶ್ ದೀಪಂ, ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ ಮೊದಲಾದವರಿದ್ದರು.  
ಉಡುಪಿ

ಕೃಷ್ಣನಂತ ಬದುಕಿನಿಂದ ರಾಷ್ಟ್ರ ಚಿಂತನೆ ಸಾಧ್ಯ

ಉಳ್ಳಾಲ: ಕೇವಲ ಕೃಷ್ಣನ ವೇಷ ಧರಿಸಿದರೆ ಸಾಲದು, ಕೃಷ್ಣನಂತ ಬದುಕು ನಮ್ಮದಾದರೆ ರಾಷ್ಟ್ರ ಚಿಂತನೆ ಸಾಧ್ಯ ಎಂದು ಮಂಜನಾಡಿ ವಿಷ್ಣುಮೂರ್ತಿ ಜನಾರ್ದನ ಭಜನಾ ಮಂಡಳಿ ಅಧ್ಯಕ್ಷ ರವಿ ಮಂಜನಾಡಿ ಅಭಿಪ್ರಾಯಪಟ್ಟರು.


ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೊಕ್ಕೊಟ್ಟಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಒಳಪೇಟೆ ಡಾ.ಬಿ.ಆರ್.ಅಂಬೇಡ್ಕರ್ ರಂಗಮಂದಿರದಲ್ಲಿ ಭಾನುವಾರ 29ನೇ ವರ್ಷದ ಎರಡನೇ ಹಂತದ ಮುದ್ದುಕೃಷ್ಣ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರ್ತಿ ಕೃತಿ ಕರ್ಕೇರ, ನಿತ್ಯಾನಂದ ಯುವಕ ಮಂಡಲ ಅಧ್ಯಕ್ಷ ಲೋಕನಾಥ್, ಸಾವಿತ್ರಿ ಕೋಟ್ಯಾನ್, ಟ್ರಸ್ಟ್ ಉಪಾಧ್ಯಕ್ಷ ಸತೀಶ್ ದೀಪಂ, ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ, ಕಾರ್ಯಕ್ರಮ ಸಂಯೋಜಕ, ಶ್ರೀ ಚಿರುಂಭ ಭಗವತಿ ಕ್ಷೇತ್ರದ ಗುರಿಕಾರ ಅಶೋಕ್ ತೊಕ್ಕೊಟ್ಟು, ಸಾಂಸ್ಕೃತಿಕ ಕಾರ್ಯದರ್ಶಿ ನವನೀತ್ ಕುತ್ತಾರ್, ಸಮಿತಿ ಸದಸ್ಯರು, ಶ್ರೀ ಚೀರುಂಭ ಭಗವತಿ ಕ್ಷೇತ್ರದ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಬಬಿತಾ ಕಾವೂರು ನಿರೂಪಿಸಿದರು.