ನವದೆಹಲಿ ವೇದವ್ಯಾಸ ಗುರುಕುಲದಲ್ಲಿ ರೇವತಿ ಕಲ್ಪ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿಯೋಗ ಗುರು ಬಾಬಾ ರಾಮ್​ ದೇವ್​ ಅವರನ್ನು ಸನ್ಮಾನಿಸಲಾಯಿತು.  
ಉಡುಪಿ

ಭಾರತೀಯ ಸಂಸ್ಕೃತಿ ನಿಂದನೆಯೇ ಕೆಲವರಿಗೆ ಕಾಯಕ: ಬಾಬಾ ರಾಮ್​ ದೇವ್

ಗೋಪಾಲಕೃಷ್ಣ ಪಾದೂರ್
ಉಡುಪಿ: ವೇದ, ಸಂಸ್ಕೃತ, ಶಾಸ್ತ್ರ್ರವಿದ್ಯೆ ಮತ್ತು ಬ್ರಾಹ್ಮಣರನ್ನು ನಿಂದಿಸುವುದನ್ನೇ ಕಾಯಕ ಮಾಡಿಕೊಂಡ ಕೆಲಮಂದಿ ವಿತಂಡವಾದ ಸರ್ವಥಾ ಸರಿಯಲ್ಲ. ಬ್ರಾಹ್ಮಣರು ಪರಕೀಯರು ವಾದ ಮಾಡುವ ಅನೇಕ ಮಂದಿಗೆ ಈ ದೇಶದ ಪರಂಪರೆಯ ಗಂಧ ಗಾಳಿಯೇ ಇಲ್ಲ ಎಂದು ಯೋಗ ಗುರು ಬಾಬಾ ರಾಮ್​ ದೇವ್​ ಹೇಳಿದರು.

ನವದೆಹಲಿ ವೇದವ್ಯಾಸ ಗುರುಕುಲದಲ್ಲಿ ರೇವತಿ ಕಲ್ಪ ರಾಷ್ಟ್ರೀಯ ವಿಚಾರ ಸಂಕಿರಣ  ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಂದೇಶ ನೀಡಿದರು.

ಶ್ರೀ ವಿಶ್ವೇಶತೀರ್ಥ ಶ್ರೀಪಾದರದ್ದು ಕೃಶ ಶರೀರವಾದರೂ ತಪಸ್ಸು ಸ್ವಾಧ್ಯಾಯ ಶುಶ್ರೂಷೆಗಳಿಂದ ಹಿಮಾಲಯದೆತ್ತರದಷ್ಟು ವ್ಯಕ್ತಿತ್ವ. ಸ್ವಧರ್ಮನಿಷ್ಠೆ ಹಾಗೂ ಪರಧರ್ಮಸಹಿಷ್ಣುತೆಯಂಥ ತತ್ವಗಳ ನಿಜ ಸ್ವರೂಪರಾಗಿದ್ದರು. ಈ ದೇಶ ಕಂಡ ಧೀಮಂತ ಗುರು ಎಂದರು.  

 ಆಯುರ್ವೇದ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರಿಗೆ ಧನ್ವಂತರಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಮಾತನಾಡಿದರು. ಕೇಂದ್ರೀಯ ಸಂಸತ ವಿವಿ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಪ್ರಸ್ತಾವನೆಗೈದರು. ವಿಚಾರ ಸಂಕಿರಣ ಸಂಯೋಜಕ ಮಹಾನಿಧಿ ಆಚಾರ್ಯ ದಂಪತಿಯನ್ನು ರಾಮ್​ ದೇವ್​ ಮತ್ತು ಪೇಜಾವರ ಶ್ರೀ  ಅಭಿನಂದಿಸಿದರು. ಡಾ.ವಿಠೋಬಾಚಾರ್ಯ , ಟಿ.ಪಿ. ಅನಂತ ಮೊದಲಾದವರಿದ್ದರು.