ಎಸ್‌ಡಿಎಂ ಕಾಲೇಜು 
ಉಡುಪಿ

ಎಸ್‌ಡಿಎಂಗೆ ರಾಷ್ಟ್ರೀಯ ರ‌್ಯಾಂಕ್ ಮಾನ್ಯತೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ರಾಷ್ಟ್ರಮಟ್ಟದ ನಿಯತಕಾಲಿಕೆಗಳು ಇತ್ತೀಚೆಗೆ ನಡೆಸಿದ ರಾಷ್ಟ್ರಮಟ್ಟದ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆ ಎಸ್‌ಡಿಎಂ ಕಾಲೇಜು ಎಲ್ಲ ವಿಭಾಗಗಳಲ್ಲೂ ಹಿಂದಿನ ಪ್ರತಿ ವರ್ಷಗಳಂತೆ ಈ ವರ್ಷವೂ ಅತ್ಯುತ್ತಮ ಶ್ರೇಣಿಯೊಂದಿಗೆ ವಿಶೇಷ ರ‌್ಯಾಂಕ್ ಮಾನ್ಯತೆ ಪಡೆದಿದೆ.
ವಿವಿಧ ಪ್ರಮುಖ ಮಾನದಂಡ ಆಧರಿಸಿ ಈ ನಿಯತಕಾಲಿಕೆಗಳು ರಾಷ್ಟ್ರಮಟ್ಟದ ವಿವಿಧ ಕಾಲೇಜುಗಳ ಮೌಲ್ಯಮಾಪನ ಮಾಡಿ ಇತ್ತೀಚೆಗೆ ಫಲಿತಾಂಶ ಪ್ರಕಟಿಸಿವೆ. ಉಜಿರೆ ಕಾಲೇಜಿನ ಬಿಎ ವಿಭಾಗ 64ನೇ ರ‌್ಯಾಂಕ್ ಗಳಿಸಿದ್ದು, ಬಿಎಸ್‌ಸಿಗೆ 80ನೇ ಸ್ಥಾನ ಲಭಿಸಿದೆ.
ಕಾಮರ್ಸ್ ವಿಭಾಗ 102ನೇ ಸ್ಥಾನದಲ್ಲಿದ್ದು, ಬಿಸಿಎ ವಿಭಾಗ 29ನೇ ರ‌್ಯಾಂಕ್ ಗಳಿಸಿದೆ. ಬಿಬಿಎ ವಿಭಾಗ 42ನೇ ಸ್ಥಾನದಲ್ಲಿದ್ದು ಎಂಎಸ್‌ಡಬ್ಲುೃ ವಿಭಾಗ 28ನೇ ಸ್ಥಾನದಲ್ಲಿದೆ. ಪತ್ರಿಕೋದ್ಯಮ ವಿಭಾಗಕ್ಕೆ 26ನೇ ಸ್ಥಾನ ಲಭಿಸಿದ್ದು, ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಮುಂಚೂಣಿ ಸ್ಥಾನಮಾನ ಗಳಿಸಿರುವ ಕಾಲೇಜುಗಳ ಪಟ್ಟಿಯಲ್ಲಿ ಪತ್ರಿಕೋದ್ಯಮ 7ನೇ ಸ್ಥಾನ ಪಡೆದು ಅಗ್ರಪಂಕ್ತಿಗೆ ಸೇರಿದೆ.
ರಾಜ್ಯಮಟ್ಟದ ಸಮೀಕ್ಷೆಯಲ್ಲಿ ಬಿಎ ವಿಭಾಗ 8ನೇ ರ‌್ಯಾಂಕ್, ಬಿಎಸ್ಸಿ 9ನೇ ರ‌್ಯಾಂಕ್, ಕಾಮರ್ಸ್ 17ನೇ ರ‌್ಯಾಂಕ್, ಬಿಸಿಎ 9ನೇ ರ‌್ಯಾಂಕ್, ಬಿಬಿಎ 10ನೇ ರ‌್ಯಾಂಕ್, ಎಂಎಸ್‌ಡಬ್ಲುೃ 6ನೇ ಮತ್ತು ಪತ್ರಿಕೋದ್ಯಮ ವಿಭಾಗ 7ನೇ ರ‌್ಯಾಂಕ್ ಪಡೆದಿವೆ.
ಅತ್ಯುತ್ತಮ ಕಾಲೇಜುಗಳಿಗೆ ಸಂಬಂಧಿಸಿದಂತೆ ನಡೆಸಿದ ಸಂಶೋಧನಾ ಸಮೀಕ್ಷೆಯಲ್ಲೂ ಬಿಎ ವಿಭಾಗಕ್ಕೆ 65ನೇ ಸ್ಥಾನ ಲಭಿಸಿದ್ದು, ಬಿಎಸ್‌ಸಿಗೆ 101, ಬಿಕಾಂಗೆ 116, ಪತ್ರಿಕೋದ್ಯಮಕ್ಕೆ 24ನೇ ರ‌್ಯಾಂಕ್ ಲಭ್ಯವಾಗಿದೆ.
ಅಗ್ರಗಣ್ಯ ಮಾಸ್ ಕಮ್ಯುನಿಕೇಷನ್ ಸಂಸ್ಥೆ ಗುರುತಿಸುವ ಉದ್ದೇಶದಿಂದ ನಡೆಸಿದ ರಾಷ್ಟ್ರೀಯ ಐಸಿಎಆರ್‌ಇ ಸಮೀಕ್ಷೆಯಲ್ಲಿ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ 16ನೇ ರ‌್ಯಾಂಕ್ ಪಡೆದುಕೊಂಡಿದೆ. ಸಮೂಹ ಸಂವಹನಕ್ಕೆ ಸಂಬಂಧಿಸಿದ ಇದೇ ಸಮೀಕ್ಷೆಯಲ್ಲಿ ಕಾಲೇಜಿನ ಎಂಎಸ್‌ಡಬ್ಲುೃ 26ನೇ ರ‌್ಯಾಂಕ್, ಬಿ.ಬಿ.ಎ 33ನೇ ರ‌್ಯಾಂಕ್, ಬಿಎಸ್‌ಸಿ 43, ಕಾಮರ್ಸ್ 62 ಮತ್ತು ಬಿ.ಎ 65ನೇ ರ‌್ಯಾಂಕ್ ಗಳಿಸಿವೆ.

ರಾಷ್ಟ್ರಮಟ್ಟದ ನಿಯತಕಾಲಿಕೆಗಳ ಸಮೀಕ್ಷೆಗಳಲ್ಲಿ ಉಜಿರೆ ಎಸ್‌ಡಿಎಂ ಕಾಲೇಜು ಅಗ್ರಗಣ್ಯ ರ‌್ಯಾಂಕ್ ಗಳಿಕೆ ಮೂಲಕ ಗಮನ ಸೆಳೆಯುತ್ತಲೇ ಬಂದಿದೆ. ಪ್ರಸಕ್ತ ವರ್ಷದ ಸಮೀಕ್ಷೆಯೂ ಕಾಲೇಜಿನ ಅಗ್ರಗಣ್ಯ ವೈಶಿಷ್ಟೃತೆ ಮತ್ತೊಮ್ಮೆ ದೃಢೀಕರಿಸಿದೆ.

— ಡಾ.ವಿಶ್ವನಾಥ ಪಿ., ಪ್ರಾಂಶುಪಾಲ

*ಫೋಟೋ: ಬಿಇಎಲ್-ಜುಲೈ 30-ಎಸ್‌ಡಿಎಂ ಕಾಲೇಜು