ಉಡುಪಿಯ ತೆಂಕನಿಡಿಯೂರು ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ರವಿಚಂದ್ರ ಮಾತನಾಡಿದರು. ನಿತ್ಯಾನಂದ ವಿ. ಗಾಂವಕರ್, ಡಾ. ರಘು ನಾಯ್ಕ್, ಬಿಂದು ಟಿ., ಪ್ರಶಾಂತ್ ನೀಲಾವರ ಇದ್ದರು.
* ನಿವೃತ್ತ ಗ್ರಂಥಪಾಲಕ ರವಿಚಂದ್ರ ಅನಿಸಿಕೆ
* ತೆಂಕನಿಡಿಯೂರು ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ
ಉಡುಪಿ: ಭಾರತದಲ್ಲಿ ಗ್ರಂಥಾಲಯಗಳ ಬೆಳವಣಿಗೆಗೆ 'ಗ್ರಂಥಾಲಯಗಳ ಪಿತಾಮಹ' ಖ್ಯಾತಿಯ ಡಾ. ಎಸ್.ಆರ್. ರಂಗನಾಥನ್ ಕೊಡುಗೆ ಅಪಾರವಾಗಿದೆ. ಇನ್ಪಾಮೇರ್ಷನ್ ಮತ್ತು ಲೈಬ್ರರಿ ನೆಟ್ವರ್ಕ್ (ಇನ್ಫ್ಲಿಬ್ನೆಟ್)ನಿಂದ ಉಚಿತವಾಗಿ ಮತ್ತು ಸುಲಭವಾಗಿ ಇಂದು ಎಲ್ಲ ಬಗೆಯ ಮಾಹಿತಿ ಪಡೆಯಬಹುದಾಗಿದೆ. ಗ್ರಂಥಾಲಯವು ವಿದ್ಯಾರ್ಥಿಗಳ ಬುದ್ಧಿ ಕ್ಷಮತೆ ಹೆಚ್ಚಿಸುವ ಜ್ಞಾನಗಳ ಗಣಿಯಾಗಿದೆ ಎಂದು ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಗ್ರಂಥಪಾಲಕ ರವಿಚಂದ್ರ ತಿಳಿಸಿದರು.
ಉಡುಪಿ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾಲೇಜಿನ ಗ್ರಂಥಾಲಯ ಮಾಹಿತಿ ಮತ್ತು ವಿಜ್ಞಾನ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿದರು.
ಕ್ಷೇಮಪಾಲನಾಧಿಕಾರಿ ಡಾ. ರಘು ನಾಯ್ಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಶಾಸ್ತ್ರದ ಸಹಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು. ಸಂಖ್ಯಾಶಾಸ್ತ್ರದ ಸಹಪ್ರಾಧ್ಯಾಪಕ ಉಮೇಶ್ ಪೈ ವಂದಿಸಿದರು. ಕಾಲೇಜಿನ ಗ್ರಂಥಪಾಲಕ ಕೃಷ್ಣ ಸಾಸ್ತಾನ ಕಾರ್ಯಕ್ರಮ ಆಯೋಜಿಸಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿಂದು ಟಿ., ಆಂಗ್ಲ ಭಾಷಾ ಸಹಪ್ರಧ್ಯಾಪಕಿ ಡಾ. ಗೀತಾ, ಅರ್ಥಶಾಸ್ತ್ರದ ಸಹಪ್ರಾಧ್ಯಾಪಕಿ ಡಾ. ಜಯಮಂಗಳಾ, ಕನ್ನಡ ಸಹಾಯಕ ಪ್ರಾಧ್ಯಾಪಕ ಮಾರುತಿ, ವಾಣಿಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಬಾಲರಾಜ್, ಆರತಿ ಜಿ. ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.