ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ 
ಉಡುಪಿ

12ರಂದು ಪಡುಕುತ್ಯಾರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಪ್ರಮುಖ ಮುಖ್ಯಾಂಶಗಳು

  • ಆನೆಗುಂದಿ ಶ್ರೀ ಪಟ್ಟಾಭಿಷೇಕ ಮಹೋತ್ಸವ ವರ್ಧಂತ್ಯುತ್ಸವ
  • ವಿವಿಧ ಕ್ಷೇತ್ರಗಳ ಸಾಧಕರಿಗೆ ಪುರಸ್ಕಾರ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ 16ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವ ಅಂಗವಾಗಿ ಮೇ 12ರಂದು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಸಹಿತ ಆನೆಗುಂದಿ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ರಾಷ್ಟ್ರೀಯ ಪ್ರಶಸ್ತಿಗೆ ಇ.ಭೀಮಸೇನ ಬಡಿಗೇರ, ಕಲಬುರಗಿ ಕೊತ್ತನೂರು ಶಿಲ್ಪಿ ಸ್ಥಪತಿ ಮಾನಯ್ಯ ಎನ್​.ಬಡಿಗೇರ, ಲೋಹಶಿಲ್ಪಿ ಬೆಂಗಳೂರಿನ ಹೊನ್ನಪ್ಪಾಚಾರ್​, ಸ್ಥಪತಿ ಕುಂಭಕೋಣಂನ ಪ್ರಭಾಕರ ಗೋವಿಂದ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಎಸ್​ಕೆಎಫ್​ ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಎರಡು ವರ್ಷಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಜಿ.ರಾಮಕೃಷ್ಣ ಆಚಾರ್​ ಅಧ್ಯಕ್ಷತೆಯ ರಾಷ್ಟ್ರೀಯ ಪ್ರಶಸ್ತಿ ಸಮಿತಿ ಮತ್ತು ಬಿ.ಶ್ರೀಕಂಠಾಚಾರ್​ ಸಂಚಾಲಕತ್ವದಲ್ಲಿ ಆಯ್ಕೆ ಮಾಡಲಾಗಿದೆ.
ಯುವ ಪ್ರತಿಭೆಗಳಾದ ಪ್ರಮೋದ್​ ಸಿ.ಕೆ.ಕಡೂರು, ಮನೋಜ್ಞ ಟಿ.ಆಚಾರ್ಯ ಪುತ್ತೂರು ಹಾಗೂ ಮಹಾದಾನಿಗಳನ್ನು ಅಭಿನಂದಿಸಲಾಗುವುದು. ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸುವರು ಎಂದು ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್​ ಎಂ.ಬಿ.ಆಚಾರ್​ ಕಂಬಾರ್​ ತಿಳಿಸಿದ್ದಾರೆ.

ಆನೆಗುಂದಿ ಶ್ರೀ ಪ್ರಶಸ್ತಿ ಪ್ರದಾನ

ಮಹಾಸಂಸ್ಥಾನದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಗಭೂಷಣ ಆಚಾರ್ಯ ತುಮಕೂರು(ಶಿಲ್ಪ), ಸಿ.ವಿ.ಪೊದುವಾಳ್​ ಮಂಗಳೂರು(ಜೋತಿಷ್ಯ), ವಾದಿರಾಜ ಆಚಾರ್ಯ ನೇಜಾರು(ಸಾಮಾಜಿಕ ಸೇವೆ), ಎಸ್​.ಪಿ.ಗುರುದಾಸ್​ ಮಂಗಳೂರು(ಹರಿದಾಸ ಸೇವೆ), ವಿಘ್ನೇಶ್ವರ ಪುರೋಹಿತ್​ ಮೂಡುಬಿದಿರೆ(ವೈದಿಕ), ಕೃಷ್ಣ ಆಚಾರ್ಯ ನಕ್ರೆ ಕಾರ್ಕಳ(ಶಿಲಾ ಶಿಲ್ಪ ವಿಭಾಗ), ಶಿಲ್ಪಿ ದೇವಿದಾಸ್​ ಆಚಾರ್ಯ ತ್ರಿಶೂರು, ಕೇರಳ(ವಾಸ್ತುಶಿಲ್ಪ) ಅವರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ನೀಡಲಾಗುವುದು.