ಉಪ್ಪಳ: ಮೃತಪಟ್ಟ ಮಹಿಳೆಯೊಬ್ಬರ ಪತಿಯ ಹೆಸರನ್ನು ರಿಜಿಸ್ಟರ್ ಪುಸ್ತಕದಲ್ಲಿ ತಿದ್ದುಪಡಿ ಮಾಡಿ ವಂಚನೆ ನಡೆಸಿರುವುದಾಗಿ ಪೈವಳಿಕೆ ಪಂಚಾಯಿತಿ ಕಾರ್ಯದರ್ಶಿ ಕಾಸರಗೋಡು ಎಎಸ್ಪಿ ಅಶೋಕ್ ಅಚ್ಯುತನ್ ಅವರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
2011ರ ನಿಧನ ರಿಜಿಸ್ಟರ್‌ನಲ್ಲಿ ವಂಚನೆ ನಡೆಸಿರುವುದಾಗಿ ದೂರಲಾಗಿದೆ. 2011 ಆ.17ರಂದು ಮೃತಪಟ್ಟ ಕಮಲಾ ಎಂಬುವರ ಪತಿಯ ಹೆಸರು ತುಕ್ರ ಎಂದು ರಿಜಿಸ್ಟರ್‌ನಲ್ಲಿ ದಾಖಲಿಸಲಾಗಿತ್ತು. ಇದನ್ನು ತಿರುಚಿ ಗುರುವ ಎಂದು ಬರೆದು ವಂಚನೆ ನಡೆಸಲಾಗಿದೆ ಎಂದು ದೂರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಆರೋಪಿಯಾಗಿ ಸೇರಿಸಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.