ಬಂಧನ 
ಉಡುಪಿ

ಹತ್ಯೆ ಪ್ರಕರಣದ ಆರೋಪಿ ಬಂಧನ

ಇಂದಿರಾ ಎನ್ ಕೆ
ಕಾಸರಗೋಡು: ಸೀತಾಂಗೋಳಿಯಲ್ಲಿ ಯುವಕನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ನೆಕ್ರಾಜೆ ನಿವಾಸಿ, ವ್ಯಾಪಾರಿ ಅರುಣ್ ಕುಮಾರ್ ಯಾನೆ ಭರತ್(33) ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಏ.28ರಂದು ಕುಂಟಿಕಾನ ನಿವಾಸಿ ಸಫಾಹಿದ್ ಯಾನೆ ಶಫಾಯತ್(35) ಎಂಬಾತನ ಹತ್ಯೆ ನಡೆದಿದ್ದು, ಸೀತಾಂಗೋಳಿಯ ಮದ್ಯದಂಗಡಿ ಸಮೀಪದ ಕಟ್ಟಡದ ಹಿಂಭಾಗದಲ್ಲಿ ಶವ ಪತ್ತೆಯಾಗಿತ್ತು.
ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಪ್ರಮುಖ ಆರೋಪಿ ಕುಂಬಳೆ ಕೋಟೆಕಾರ್ ನಿವಾಸಿ ಶ್ರೀನಿವಾಸ(39) ಎಂಬಾತನನ್ನು ಅದಾಗಲೇ ಬಂಧಿಸಿದ್ದರು.