ಮುಳ್ಳಿಕಟ್ಟೆಯಲ್ಲಿ ವಿಶ್ರಾಂತಿ ಕೊಠಡಿ, ಶೌಚಗೃಹ ವಾತ್ರ ನಿರ್ಮಾಣವಾಗಿರುವುದು.
- ಮುಳ್ಳಿಕಟ್ಟೆ
- ಟ್ರಕ್ ಬೇ
- ಹೆದ್ದಾರಿ
- ವಾಹನ ಸಾಲು
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಸರಕು ಸಾಗಾಟ ವಾಡುವ ಭಾರಿ ವಾಹನಗಳ ನಿಲುಗಡೆಗಾಗಿ ಸುಸಜ್ಜಿತ ವಿಶ್ರಾಂತಿ ಪ್ರದೇಶ(ಟ್ರಕ್ ಬೇ) ನಿರ್ವಾಣಕ್ಕಾಗಿ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ 6 ವರ್ಷಗಳ ಹಿಂದೆಯೇ 6 ಎಕರೆ ಜಾಗವನ್ನು ಭೂಸ್ವಾಧೀನಪಡಿಸಲಾಗಿದೆ. ಆದರೆ ಸಂತ್ರಸ್ತರಿಗೆ ಪೂರ್ಣ ಪ್ರವಾಣದ ಹಣ ಪಾವತಿಯಾಗದೆ ಕಾಮಗಾರಿ ಬಾಕಿಯಾಗಿದೆ.
ಮುಳ್ಳಿಕಟ್ಟೆಯಲ್ಲಿ ಟ್ರಕ್ ಬೇ ಆರಂಭವಾಗದ ಕಾರಣ ತ್ರಾಸಿ- ಮರವಂತೆ ಬೀಚ್ ಸಹಿತ ಹೆದ್ದಾರಿಯ ಅಲ್ಲಲ್ಲಿ ಭಾರಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದು ಅಪಘಾತಕ್ಕೂ ಕಾರಣವಾಗುತ್ತಿದೆ. ಲಾರಿ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರಿಗಾಗಿ ಟ್ರಕ್ ಬೇ ಪ್ರದೇಶ ನಿರ್ವಾಣ ಯೋಜನೆಯನ್ನು 2020-21ರಲ್ಲಿ ರೂಪಿಸಲಾಗಿತ್ತು. ಆದರೆ ಈಗ ಅಲ್ಲಿ ಆಗಿರುವುದು ವಿಶ್ರಾಂತಿ ಕೊಠಡಿ, ಶೌಚಗೃಹ ವಾತ್ರ. ಅದು ಪೂರ್ಣಗೊಂಡು 4-5 ವರ್ಷಗಳೇ ಕಳೆದಿವೆ. ಆದರೆ ಇದರ ಪ್ರಯೋಜನ ಯಾರಿಗೂ ಸಿಕ್ಕಿಲ್ಲ.
ಇಲ್ಲಿ ನಿರ್ಮಾಣಗೊಂಡಿರುವ ವಿಶ್ರಾಂತಿ ಕೊಠಡಿ, ಶೌಚಗೃಹ, ಸ್ನಾನಗೃಹದ ಕೊಠಡಿ ಕೆಲ ದಿನಗಳ ಕಾಲ ತೆರೆದುಕೊಂಡಿತ್ತು. ಆದರೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸದ ಕಾರಣ ಗಬ್ಬೆದ್ದು, ದುರ್ನಾತ ಬೀರುವಂತಾಗಿತ್ತು. ಇದಾದ 15 ದಿನಗಳಲ್ಲೇ ಮುಚ್ಚಲಾಗಿತ್ತು. ಹೀಗಾಗಿ ಲಾರಿ ಚಾಲಕರು ಮರವಂತೆ ಬೀಚ್ ಬಳಿಯೇ ಸಾಲುಗಟ್ಟಿ ನಿಲ್ಲಿಸುತ್ತಿದ್ದಾರೆ. ಇದರಿಂದ ಪ್ರವಾಸಿಗರಿಗೂ ಬೀಚ್ ವೀಕ್ಷಣೆಗೆ ಅಡ್ಡಿಯಾಗುತ್ತಿದೆ.
ಹೆದ್ದಾರಿ ಪ್ರಾಧಿಕಾರವೇ ಹೊಣೆ
ಟ್ರಕ್ ಬೇಗಾಗಿ ಜಾಗ ಸ್ವಾಧೀನಪಡಿಸಿಕೊಂಡು 5-6 ವರ್ಷವಾದರೂ ಇನ್ನೂ ಕಾಮಗಾರಿ ಆಗಿಲ್ಲ. ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಸಂಸ್ಥೆಯವರೇ ಕಾರಣ. ತ್ರಾಸಿ- ಮರವಂತೆ ಬೀಚ್ ಬಳಿ ನಡೆದ ಭೀಕರ ಅಪಘಾತಕ್ಕೂ ಅವರೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಯಾಕೆ ವಿಳಂಬ?
ಟ್ರಕ್ ಬೇ ನಿರ್ವಾಣಕ್ಕೆ 2021ರಲ್ಲೇ 5.99 ಎಕರೆ ಜಾಗ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದಕ್ಕೆ ಒಟ್ಟು 31 ಕೋಟಿ. ರೂ. ಪರಿಹಾರವನ್ನು ಸಂತ್ರಸ್ತರಿಗೆ ಪಾವತಿಸಬೇಕಿತ್ತು. ಈವರೆಗೆ ಕೇವಲ 12 ಕೋಟಿ. ರೂ. ಮಾತ್ರ ಪಾವತಿಯಾಗಿದೆ. ಪರಿಹಾರ ಹಣ ಜಾಸ್ತಿಯಾಯಿತೆಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ಇನ್ನೂ ಇತ್ಯರ್ಥವಾಗಿಲ್ಲ.
ಭೂಸ್ವಾಧೀನ ಸಂಬಂಧ ಪರಿಹಾರ ಹಣ ಪಾವತಿ ಬಾಕಿಯಿದೆ. ಈ ಬಗ್ಗೆ ನಾನೇ ಖುದ್ದಾಗಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. ಹೆದ್ದಾರಿ ಪ್ರಾಧಿಕಾರದ ಬೆಂಗಳೂರಿನ ಪ್ರಾದೇಶಿಕ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಲೇ ಇಂತಹ ಅಪಘಾತಗಳು ನಡೆಯುತ್ತಿವೆ. ಇದಕ್ಕೆ ಪ್ರಾಧಿಕಾರದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ವಾಡಬೇಕು.
— ಬಿ.ವೈ.ರಾವೇಂದ್ರ ಸಂಸದ