ಹಿರಿಯರಾದ ಹರಿಣಾಕ್ಷಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟು ಡಾ.ಶಿಲ್ಪಶ್ರೀ ಕುಂಪಲ ಅವರನ್ನು ಸನ್ಮಾನಿಸಲಾಯಿತು. ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ, ಮಹಿಳಾ ವೇದಿಕೆ ಅಧ್ಯಕ್ಷೆ ಗಂಗಾ ಆನಂದ್, ಸುರೇಖಾ ಎಚ್.ಎಸ್.ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ತೊಕ್ಕೊಟ್ಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ ಪಜೀರು ಗೋವನಿತಾಶ್ರಯದಲ್ಲಿ ವಿಶ್ವ ಮಹಿಳಾ ದಿನ ಆಚರಿಸಲಾಯಿತು.
ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ ಉದ್ಘಾಟಿಸಿ ಮಾತನಾಡಿ, ಇಂದು ಮಹಿಳೆಯರ ಸಾಧನೆ ಎಲ್ಲ ಕ್ಷೇತ್ರಗಳಲ್ಲೂ ಗಮನ ಸೆಳೆಯುತ್ತಿದೆ.
ಗೃಹಿಣಿಯಾಗಿ, ತಾಯಿಯಾಗಿ, ಶಿಕ್ಷಕಿಯಾಗಿ, ಮನೆಬೆಳಗುವ ಮಾತೆಯರೇ ಮಕ್ಕಳ ಸಂಸ್ಕಾರಯುತ ಬದುಕಿಗೆ ಅಡಿಪಾಯ ಎಂದರು.
ಹಿರಿಯರಾದ ಹರಿಣಾಕ್ಷಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟು ಡಾ.ಶಿಲ್ಪಶ್ರೀ ಕುಂಪಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಗೋಪೂಜೆ ನೆರವೇರಿಸಿ, ಗೋಗ್ರಾಸ ನೀಡಲಾಯಿತು. ಗೋವನಿತಾಶ್ರಯಕ್ಕೆ ಸಹಾಯಧನ ಹಸ್ತಾಂತರಿಸಲಾಯಿತು.
ಮಹಿಳಾ ವೇದಿಕೆ ಅಧ್ಯಕ್ಷೆ ಗಂಗಾ ಆನಂದ್ ಅಧ್ಯಕ್ಷತೆ ವಹಿಸಿದ್ದರು. ಸುರೇಖಾ ಎಚ್.ಎಸ್.ಪೂಜಾರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ದಿನೇಶ್ ಅತ್ತಾವರ, ಯೋಗಿನಿ ಕೆ.ಟಿ.ಸುವರ್ಣ, ಆನಂದ ಅಸೈಗೋಳಿ ಮೊದಲಾದವರು ಉಪಸ್ಥಿತರಿದ್ದರು.
ಶಮ್ಮಿ ಎಸ್.ಕರ್ಕೇರ ಸ್ವಾಗತಿಸಿದರು. ಪೂರ್ಣಿಮಾ ಎ.ಜೆ.ಶೇಖರ್ ಹಾಗೂ ಸುನಿತಾ ಬೆಳ್ಮ ಅಭಿನಂದನಾ ಪತ್ರ ವಾಚಿಸಿದರು. ಯಶೋಧಾ ಅಂಬಲಮೊಗರು ವಂದಿಸಿದರು. ವಿನೀತಾ ಮೋಹನ್ ದಾಸ್ ನಿರೂಪಿಸಿದರು.