ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ಮೂಲಮಂತ್ರ ಹವನ ಹಾಗೂ ಲಕ್ಷ ಪ್ರದಕ್ಷಿಣೆ ನಮಸ್ಕಾರ ಕಾರ್ಯಕ್ರಮ ಸಂಪನ್ನಗೊಂಡಿತು. ಗುಜ್ಜಾಡಿ ಪ್ರಭಾಕರ್ ನಾಯಕ್, ಎಚ್. ಮಹೇಶ್ ಶೆಣೈ, ವಿನುತಾ ಶೆಣೈ, ಬಿ.ದಯಾಘನ್ ಭಟ್, ಬಿ.ಮೇಘಶ್ಯಾಮ ಭಟ್ ಇತರರಿದ್ದರು.
* ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ಅಧಿಕ ಮಾಸ ಕಾರ್ಯಕ್ರಮ
ಉಡುಪಿ: ತೆಂಕಪೇಟೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ಪುರುಷೋತ್ತಮ ಅಧಿಕ ಜ್ಯೇಷ್ಠ ಮಾಸದ ನಿಮಿತ್ತ ಮೂಲಮಂತ್ರ ಹವನ (ಓಂ ನಮೋ ನಾರಾಯಣಾಯ) ಹಾಗೂ ಮೇ 17ರಂದು ಪ್ರಾರಂಭಗೊಂಡಿದ್ದ ಲಕ್ಷ ಪ್ರದಕ್ಷಿಣೆ ನಮಸ್ಕಾರ ಕಾರ್ಯಕ್ರಮ ಸೋಮವಾರ (ಜೂ.15) ಸಂಪನ್ನಗೊಂಡಿತು.
ದೇವರಿಗೆ ವಿಶೇಷ 30 ಪವಮಾನಾಭಿಷೇಕ ಮತ್ತು ಕನಕಾಭಿಷೇಕ ನಡೆಯಿತು. ವೇ.ಮೂ. ಬಿ.ದಯಾಘನ್ ಭಟ್ ಮತ್ತು ಬಿ.ಮೇಘಶ್ಯಾಮ ಭಟ್ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್ ನೇತೃತ್ವದಲ್ಲಿ ಮೊಕ್ತೇಸರ ಎಚ್. ಮಹೇಶ್ ಶೆಣೈ, ವಿನುತಾ ಶೆಣೈ ದಂಪತಿ ಸಹಭಾಗಿತ್ವದಲ್ಲಿ ಮೂಲಮಂತ್ರ ಹವನ, ಹೋಮ ಇತ್ಯಾದಿ ಜರುಗಿತು.
ವೈದಿಕರಾದ ವೇ.ಮೂ. ಉಪ್ಪುಂದ ವಿನಾಯಕ್ ಅವಧಾನಿ, ಉಪ್ಪುಂದ ರವೀಂದ್ರ ಭಟ್, ಕಾರ್ಕಳ ದೀಪಕ್ ಭಟ್, ಚೇಂಪಿ ಲಕ್ಷ್ಮೀನಾರಾಯಣ ಭಟ್, ಮಾರೂರು ಹರಿಪ್ರಸಾದ್ ಶರ್ಮ, ಉಪ್ಪುಂದ ಪ್ರಸನ್ನ ಭಟ್, ಚೇಂಪಿ ರಮೇಶ್ ಭಟ್ಸಹಕರಿಸಿದರು.
ಅಧಿಕ ಮಾಸದ ನಿಮಿತ್ತ ವಿಜಯಲಕ್ಷ್ಮೀ ಕೈಲಾಸ್ನಾಥ್ ಶೆಣೈ, ಚಿತ್ರಕಲಾ ಅಶೋಕ್ ಬಾಳಿಗಾ, ನೀತಾ ನಾರಾಯಣ ಪ್ರಭು, ಅಮಿತಾ ಉಮೇಶ್ ಪೈ, ಗೀತಾ ದಿನೇಶ್ ಪೈ ಇತರರು ತುಪ್ಪದ ದೀಪ ಪ್ರಜ್ವಲಿಸಿದರು. ವೈದಿಕರಿಗೆ ದೀಪದಾನ, ಅಪೋಪ ದಾನ, ದಂಪತಿ ಪೂಜೆ, ಬ್ರಾಹ್ಮಣ ಪೂಜೆ ನಡೆಯಿತು.
ನರಸಿಂಹ ಜಪ ಹವನ, ಗಾಯತ್ರಿ ಜಪ ಹವನ, ಪುಷ್ಪಾರ್ಚನೆ, ಕುಂಕುಮಾರ್ಚನೆ ಸಹಿತ ವಿವಿಧ ಧಾರ್ಮಿಕ ವಿಧಾನ ಹಮ್ಮಿಕೊಳ್ಳಲಾಗಿತ್ತು. ಡಾ. ಯು. ಕೈಲಾಸ್ನಾಥ್ ಶೆಣೈ, ಉಡುಪಿ ಅಶೋಕ್ ಬಾಳಿಗಾ, ಯು. ನಾರಾಯಣ ಪ್ರಭು, ಹಾರಾಡಿ ಉಮೇಶ್ ಪೈ, ಯು. ದಿನೇಶ್ ಪೈ, ಮಟ್ಟಾರ್ ವಸಂತ ಕಿಣಿ, ಪ್ರಭಾಕರ್ ಭಟ್, ಡಾ. ವಿನಾಯಕ್ ಶೆಣೈ, ಜಿಎಸ್ಬಿ ಯುವಕ ಮಂಡಳಿ ಮತ್ತು ಮಹಿಳಾ ಮಂಡಳಿ ಸದಸ್ಯರು, ಸ್ವಯಂ ಸೇವಕರು, ದೇವಸ್ಥಾನದ ಸಿಬ್ಬಂದಿ, ಸಮಾಜ ಬಾಂಧವರು ಪಾಲ್ಗೊಂಡಿದ್ದರು.