ಉಡುಪಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಮಾಸಿಕ ಸಭೆ ನಡೆಯಿತು. ಜ್ಯೋತಿ ಹೆಬ್ಬಾರ್, ಗೀತಾ ವಾಗ್ಳೆ, ಸರಸು ಬಂಗೇರ, ಮಾಲಿನಿ ರೈ, ದೇವಕಿ ಸಣ್ಣಯ್ಯ, ಸುಮಾ ಅಡ್ಯಂತಾಯ, ಅನಿತಾ ಬಾಬು ಪೂಜಾರಿ, ಶಾಂತಾ ರೈ, ರೇಖಾ ಸುವರ್ಣ, ಮೀನಾಕ್ಷಿ ಮಾಧವ ಬನ್ನಂಜೆ, ಪುಷ್ಪಾ ಅಂಚನ್, ಸಂಧ್ಯಾ ತಿಲಕ್ರಾಜ್, ಮಮತಾ ಶೆಟ್ಟಿ ಇತರರಿದ್ದರು.
* ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಕರೆ
* ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಮಾಸಿಕ ಸಭೆ
ಉಡುಪಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮುಂದುವರಿದಿದೆ. ಆಯಾ ವ್ಯಾಪ್ತಿಯ ಬಿಎಲ್ಒಗಳೊಂದಿಗೆ ಸ್ಥಳೀಯ ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರು ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಪದಾಧಿಕಾರಿಗಳು ಉಪಸ್ಥಿತರಿದ್ದು ಪ್ರಕ್ರಿಯೆ ಪರಿಶೀಲಿಸಬೇಕು. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರನ್ನು ಸೇರ್ಪಡೆಗೊಳಿಸಲು ಶ್ರಮಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕೊಡವೂರು ಕರೆ ನೀಡಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ (ಜು.18) ಆಯೋಜಿಸಿದ್ದ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಮಹಿಳಾ ಕಾಂಗ್ರೆಸ್ನ ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿ, ತುಳುನಾಡಿನ ಸಂಸ್ಕೃತಿ ಹಾಗೂ ಸಾಂಪ್ರದಾಯ ಬೆಳೆಸುವ ನಿಟ್ಟಿನಲ್ಲಿ 'ಆಟಿಡೊಂಜಿ ದಿನ' ಕಾರ್ಯಕ್ರಮ ಆಯೋಜಿಸಲಾಗುವುದು. ಗೃಹಜ್ಯೋತಿ ಮರುನೋಂದಣಿಯ ಪ್ರಕ್ರಿಯೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸಹಾಯ ಮಾಡಲು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಪದಾಧಿಕಾರಿಗಳು ಹಾಗೂ ಎಲ್ಲ ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಹಕರಿಸಬೇಕು ಎಂದರು.
ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ನಿರೀಕ್ಷಾ ಮೆಂಡನ್ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಳೆ, ಮಹಿಳಾ ಕಾಂಗ್ರೆಸ್ನ ಹಿರಿಯ ನಾಯಕಿಯರಾದ ಸರಸು ಬಂಗೇರ, ಮಾಲಿನಿ ರೈ, ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆಯರಾದ ದೇವಕಿ ಸಣ್ಣಯ್ಯ, ಸುಮಾ ಅಡ್ಯಂತಾಯ, ಅನಿತಾ ಬಾಬು ಪೂಜಾರಿ, ಶಾಂತಾ ರೈ, ರೇಖಾ ಸುವರ್ಣ, ಜಿಲ್ಲಾ ಮಹಿಳಾ ಕಾಂಗ್ರೆಸ್ನ ಪ್ರಮುಖರಾದ ಮೀನಾಕ್ಷಿ ಮಾಧವ ಬನ್ನಂಜೆ, ಗೋಪಿ ನಾಯ್ಕ್, ದೇವಕಿ ಕೋಟ್ಯಾನ್, ಸರಸ್ವತಿ, ಜ್ಯೋತಿ ಪುತ್ರನ್, ಮಮತಾ ಕಿಶೋರ್ ಶೆಟ್ಟಿ, ರೋಶಿನಿ ಶೆಟ್ಟಿ, ಜಾನಕಿ ನಾಯ್ಕ್, ವಾಣಿ ಶೆಟ್ಟಿ, ಶೋಭಾ ನಾಯ್ಕ್, ಸುಧಾ ಪೂಜಾರಿ, ಲೀಲಾವತಿ, ಸುಮನಾ ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಅಂಚನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂಧ್ಯಾ ತಿಲಕ್ರಾಜ್ ವರದಿ ವಾಚಿಸಿದರು. ಉಡುಪಿ ಬ್ಲಾಕ್ನ ಅಧ್ಯಕ್ಷೆ ಮಮತಾ ಶೆಟ್ಟಿ ವಂದಿಸಿದರು.