ಸಾಕುಪ್ರಾಣಿಗಳಿಗೆ ತುರ್ತು ಸಂದರ್ಭದಲ್ಲಿ ಮನೆ ಬಾಗಿಲಲ್ಲೇ ವೈದ್ಯಕೀಯ ಸೇವೆ ಕಾಸರಗೋಡು ಜಿಲ್ಲೆಯಲ್ಲಿ ಜಾರಿ  
ಉಡುಪಿ

ಕಾಸರಗೋಡು ಜಿಲ್ಲೆಯಲ್ಲಿ ಸಂಚಾರಿ ಪಶುಶಸಚಿಕಿತ್ಸಾ ಘಟಕ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಅನಾರೋಗ್ಯಕ್ಕೆ ಒಳಗಾದ ಸಾಕುಪ್ರಾಣಿಗಳಿಗೆ ತುರ್ತು ಸಂದರ್ಭದಲ್ಲಿ ಮನೆ ಬಾಗಿಲಲ್ಲೇ ವೈದ್ಯಕೀಯ ಸೇವೆ ಲಭ್ಯವಿದ್ದು, ಹೈನುಗಾರರು ಪಶು ಆಸ್ಪತ್ರೆಗೆ ಅಲೆದಾಡುವುದು ತಪ್ಪಲಿದೆ. ಪಶುಸಂಗೋಪನಾ ಇಲಾಖೆಯು ಅತ್ಯಾಧುನಿಕ ಸೌಲಭ್ಯಗಳಿರುವ ಹಾಗೂ ರಾತ್ರಿ ತುರ್ತು ಚಿಕಿತ್ಸಾ ಘಟಕಗಳಿರುವ ಸಂಚಾರಿ ಶಸಚಿಕಿತ್ಸೆ ವ್ಯವಸ್ಥೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಿದೆ. ಇನ್ನುಮುಂದೆ ಈ ಸೇವೆ ಮನೆಬಾಗಿಲಿಗೆ ಲಭ್ಯವಿರಲಿದ್ದು, ಜಿಲ್ಲೆಯ ಹೈನುಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹೈನುಗಾರರು ಅನಾರೋಗ್ಯಕ್ಕೆ ಒಳಗಾದ ತಮ್ಮ ಪ್ರಾಣಿಗಳನ್ನು ವಾಹನದಲ್ಲಿ ಸಾಗಿಸುವುದೇ ದೊಡ್ಡ ಸವಾಲಾಗಿತ್ತು. ಕಳೆದ ವರ್ಷ ಮೇ ತಿಂಗಳಿನಲ್ಲಿ ಮೊಬೈಲ್ ಶಸಚಿಕಿತ್ಸಾ ಘಟಕ ಆರಂಭವಾಗಿದ್ದು, ಒಂದು ವರ್ಷ ಪೂರೈಸುತ್ತಿದೆ. ಇದುವರೆಗೆ ಘಟಕವು ತಿಂಗಳಿಗೆ ಸರಾಸರಿ ಹದಿನೆಂಟರಂತೆ ಒಟ್ಟು 180 ಪ್ರಾಣಿಗಳಿಗೆ ಗುಣಮಟ್ಟದ ಶಸಚಿಕಿತ್ಸೆ ನಡೆಸಿದೆ.
ಹೈನುಗಾರರು ತಮ್ಮ ಸ್ಥಳೀಯ ಪಶುವೈದ್ಯಕೀಯ ಆಸ್ಪತ್ರೆ ಮೂಲಕ ಘಟಕದ ಸೇವೆಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶಗಳಿವೆ. ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ತಂಡವು ಹೈನುಗಾರರು, ರೈತರ ಮನೆಗಳಿಗೆ ನೇರವಾಗಿ ಭೇಟಿ ನೀಡಿ ಸೇವೆ ಒದಗಿಸುತ್ತದೆ.

ಯಾವ್ಯಾವ ಚಿಕಿತ್ಸೆ ಲಭ್ಯ?

ಮೊಬೈಲ್ ಶಸಚಿಕಿತ್ಸಾ ಘಟಕವು ಹಸುಗಳ ಸಹಿತ ದೊಡ್ಡ ಪ್ರಾಣಿಗಳಿಗೆ ಸಿಸೇರಿಯನ್, ಗಡ್ಡೆ ನಿರ್ಮೂಲನೆ, ಹರ್ನಿಯಾ, ರುಮೆನೋಟಮಿ, ಸೀಳು ಅಂಗುಳಿನ ಚಿಕಿತ್ಸೆ ಸಹಿತ ಸಣ್ಣ ಪ್ರಾಣಿಗಳಿಗೆ ಸಂಕೀರ್ಣ ಶಸಚಿಕಿತ್ಸೆಗಳನ್ನು ಯಶಸ್ವಿಯಾಗಿ ವಾಡಿದೆ. ಶಸಚಿಕಿತ್ಸಾ ಟಕದ ಜತೆಗೆ ಆಸ್ಪತ್ರೆ ಭೇಟಿ ಅವಧಿ ಮುಗಿದ ನಂತರವೂ ತುರ್ತುಪ್ರಕರಣಗಳನ್ನು ನಿಭಾಯಿಸಲು ಜಿಲ್ಲೆಯಲ್ಲಿ ರಾತ್ರಿ ಹೊತ್ತು ಸಂಚಾರಿ ಪಶುವೈದ್ಯಕೀಯ ಟಕಗಳು ಸಕ್ರಿಯವಾಗಿವೆ. ಸಂಚಾರಿ ಶಸಚಿಕಿತ್ಸೆ ಹಾಗೂ ಚಿಕಿತ್ಸೆ ತಂಡವು ಸಂಜೆ 4 ರಿಂದ ಮಧ್ಯರಾತ್ರಿ ತನಕ ಕಾರ್ಯನಿರ್ವಹಿಸುತ್ತದೆ. ರಾತ್ರಿ ಪಾಳಿಯ ತಂಡದಲ್ಲಿ ಇಬ್ಬರು ಪಶುವೈದ್ಯ ಶಸ್ತ್ರಚಿಕಿತ್ಸಕರು, ಇಬ್ಬರು ಕಚೇರಿ ಸಹಾಯಕರು ಇರುತ್ತಾರೆ.

ಸೇವೆಗಳಿರುವ ಆಸ್ಪತ್ರೆಗಳು

ಪ್ರಸ್ತುತ ಕಾಸರಗೋಡು ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆ, ಕಾಞಂಗಾಡು ಪಶುವೈದ್ಯಕೀಯ ಆಸ್ಪತ್ರೆ, ಪರಪ್ಪ ಬ್ಲಾಕ್‌ನ ಕೊನ್ನಕ್ಕಾಡು ಪಶುವೈದ್ಯಕೀಯ ಆಸ್ಪತ್ರೆ ಮತ್ತು ಕಾರಡ್ಕ ಬ್ಲಾಕ್‌ನಲ್ಲಿರುವ ಕುತ್ತಿಕೋಲ್ ಪಶುವೈದ್ಯಕೀಯ ಚಿಕಿತ್ಸಾಲಯದಲ್ಲಿ ರಾತ್ರಿ ಸೇವೆ ಲಭ್ಯವಿದೆ. ಪ್ರತಿ ಟಕದಲ್ಲಿ ತಿಂಗಳಿಗೆ ಸರಾಸರಿ ಇಪ್ಪತ್ತೆಂಟು ಪ್ರಕರಣಗಳು ದಾಖಲಾಗುತ್ತಿದ್ದು, ಇವುಗಳಲ್ಲಿ ಸೇವೆಗಳನ್ನು ಬಯಸುವ ಜನರು ಅತಿ ಹೆಚ್ಚು. ಒಂದು ತಿಂಗಳಲ್ಲಿ ಇಲ್ಲಿ ಐವತ್ತು ಪ್ರಕರಣಗಳು ದಾಖಲಾಗುತ್ತವೆ. ಗ್ರಾಮೀಣ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಕಾಡುವ ವೈದ್ಯರ ಕೊರತೆ ಮತ್ತು ಕರ್ತವ್ಯದ ಹೊರೆಗೆ ಮೊಬೈಲ್ ಶಸಚಿಕಿತ್ಸಾ ಟಕ ಮತ್ತು ರಾತ್ರಿಯ ಚಿಕಿತ್ಸಾ ಟಕ ಉತ್ತಮ ಪರ್ಯಾಯ ವ್ಯವಸ್ಥೆಯಾಗಿದೆ.