ಕಾಸರಗೋಡು: ಕಣ್ಣೂರು ಮಟ್ಟನ್ನೂರಿನಲ್ಲಿ ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಸಿ ಪ್ರಶ್ನೆಗಳಿಗೆ ಉತ್ತರ ಬರೆದ ಪೈವಳಿಕೆ ಪಂಚಾಯಿತಿ ಕುರುಡಪದವು ಸಾದಂಗಯ ನಿವಾಸಿ ಎಸ್.ಜನಾರ್ದನ (36)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಎಸ್‌ಇಬಿಯಲ್ಲಿ ಅರೆಕಾಲಿಕ ಉದ್ಯೋಗಿಯಾಗಿರುವ ಜನಾರ್ದನ ವರ್ಕಾಡಿ ಸೆಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹುದ್ದೆ ಕಾಯಮಾತಿಗಾಗಿ ಜು.1ಕ್ಕೆ ಕಣ್ಣೂರು ಮಟ್ಟನ್ನೂರಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೇರಳ ಸರ್ಕಾರಿ ಸರ್ಕಿಫಿಕೇಟ್ ಪರೀಕ್ಷೆ ಬರೆಯುತ್ತಿದ್ದ ವೇಳೆ ಮೊಬೈಲ್ ಬಳಸಿದ್ದರು. ಈ ಬಗ್ಗೆ ಸೂಪರ್‌ವೈಸರ್ ನೀಡಿದ ಮಾಹಿತಿಯನ್ವಯ ಕೂತುಪರಂಬ ಎಸಿಪಿ ಸಿಬಿ ಟೋಮ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿತು.
ನ್ಯಾಯಾಂಗ ಬಂಧನ ವಿಧಿಸಿದೆ. ಜನಾರ್ದನಗೆ ತರಬೇತಿ ಸಂಸ್ಥೆಯ ಶಿಕ್ಷಕ ಸುರೇಶ್‌ಬಾಬು ಮೊಬೈಲಲ್ಲಿ ಪರೀಕ್ಷೆಗೆ ಸಂಬಂಧಿಸಿದ ಉತ್ತರ ರವಾನಿಸಿದ್ದರೆನ್ನಲಾಗಿದೆ. ಜನಾರ್ದನ ಬಂಧನವಾಗುತ್ತಿದ್ದಂತೆ ಸುರೇಶ್‌ಬಾಬು ತಲೆಮರೆಸಿಕೊಂಡಿದ್ದಾರೆ.