ಉಡುಪಿಯ ಕೆಂಜೂರಿನಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಸ್ಥಾಪನೆಗೆ ಯಶ್ಪಾಲ್ ಸುವರ್ಣ ಶಂಕುಸ್ಥಾಪನೆ ನೆರವೇರಿಸಿದರು. ಪ್ರತಾಪ್ ಹೆಗ್ಡೆ ಮಾರಾಳಿ, ಡಾ.ಸವಿತಾ ಕುಂದರ್, ಆದರ್ಶ್ ಶೆಟ್ಟಿ ಕೆಂಜೂರು, ದಿನೇಶ ಶೆಟ್ಟಿ, ರಮಾನಂದ್ ಶೆಟ್ಟಿ, ಸುಧಾಕರ್ ಶೆಟ್ಟಿ ಇನ್ನಿತರರು ಇದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಶ್ಲಾಘನೆ
* ಕೆಂಜೂರಿನಲ್ಲಿ ಆಯುಷ್ಮಾನ್ ಕೇಂದ್ರಕ್ಕೆ ಶಂಕುಸ್ಥಾಪನೆ
ಉಡುಪಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಗ್ರಾಮೀಣ ಭಾಗದ ಜನತೆಯ ಆರೋಗ್ಯ ಸೇವೆಗೆ ವಿಶೇಷ ಆದ್ಯತೆ ನೀಡಿದೆ. ಹಳ್ಳಿಯಲ್ಲೂ ಸಹ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ಪಡೆಯುವಂತಾಗಲು ತುರ್ತು ವ್ಯವಸ್ಥೆ ಇರಬೇಕೆಂಬ ಕಾರಣದಿಂದ ಆಯುಷ್ಮಾನ್ ಆರೋಗ್ಯ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಸ್ಥಳಿಯರಿಗೆ ಉತ್ತಮ ಸೇವೆ ಲಭಿಸಿ ಆರೋಗ್ಯವಂತ ಸಮಾಜದ ಜಾಗೃತಿ ಮೂಡಿಸುವ ಕಾರ್ಯವಾಗಲಿ ಎಂದು ಶಾಸಕ ಯಶ್ಪಾಲ್ ಸುವರ್ಣ ಹಾರೈಸಿದರು.
ಉಡುಪಿಯ ಕಳ್ತೂರು ಗ್ರಾಪಂ ವ್ಯಾಪ್ತಿಯ ಕೆಂಜೂರಿನಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ನಿಮಾರ್ಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ವೈದ್ಯಾಧಿಕಾರಿ ಡಾ.ಸವಿತಾ ಕುಂದರ್, ಗ್ರಾಮದ ಮುಖಂಡರಾದ ಆದರ್ಶ್ ಶೆಟ್ಟಿ ಕೆಂಜೂರು, ದಿನೇಶ ಶೆಟ್ಟಿ, ರಮಾನಂದ್ ಶೆಟ್ಟಿ, ನಾಗೇಶ್ ನಾಯಕ್, ಉಷಾ ಪೂಜಾರಿ, ಮನೋಜಕುಮಾರ್, ಹರೀಶ್ ಶೆಟ್ಟಿ, ರವಿಂದ್ರ ಪೂಜಾರಿ, ಉದಯ್ ಶೆಟ್ಟಿ, ಶಾಂತರಾಜ್ ಶೆಟ್ಟಿ, ನವೀನಚಂದ್ರ ಶೆಟ್ಟಿ, ನವೀನ ಪುತ್ರನ್, ರಘುರಾಮ್ ಶೆಟ್ಟಿ, ಸತೀಶ್ ಶೆಟ್ಟಿ, ಶ್ರೀಕಾಂತ ಆಚಾರ್ಯ, ಗ್ರಾಪಂ ಆಡಳಿತಾಧಿಕಾರಿ ಸುಧಾಕರ್ ಶೆಟ್ಟಿ ಇನ್ನಿತರರು ಇದ್ದರು.