ಉಡುಪಿಯ ಪಡುನಿಟ್ಟೂರು ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಯಶ್​ಪಾಲ್​ ಸುವರ್ಣ ಶಂಕುಸ್ಥಾಪನೆ ನೆರವೇರಿಸಿದರು. ಸಂತೋಷ್​ ಜತ್ತನ್​, ಅಣ್ಣಪ್ಪ ಸನಿಲ್​, ಜಗದೀಶ್​ ಶೆಟ್ಟಿ, ರಂಜನ್​ ಶೆಟ್ಟಿ, ನವೀನ್​ ಸನಿಲ್​, ದಿನೇಶ್​ ಜತ್ತನ್​, ರೇವತಿ, ಸುರೇಖಾ ಇತರರಿದ್ದರು. 
ಉಡುಪಿ

ಪುಟಾಣಿ ಮಕ್ಕಳ ಶಿಕ್ಷಣಕ್ಕೆ ಬುನಾದಿ ಅಂಗನವಾಡಿ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ

* ಪಡುನಿಟ್ಟೂರಿನಲ್ಲಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ

ಉಡುಪಿ: ಪಡುನಿಟ್ಟೂರು ಭಾಗದ ಸಾರ್ವಜನಿಕರ ಹಲವು ವರ್ಷದ  ಬೇಡಿಕೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ 20 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಚಾಲನೆ ನೀಡಲಾಗಿದೆ. ಕೆಲ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಪುಟಾಣಿ ಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿ ಆಗಲಿದೆ. ಅವರಿಗೆ ಪೌಷ್ಟಿಕ ಆಹಾರ ಒದಗಿಸಲೂ ಅನುಕೂಲ ಆಗಲಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ನಗರಸಭೆಯ ನಿಟ್ಟೂರು ವಾರ್ಡ್​ನ ಪಡುನಿಟ್ಟೂರು ಭಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ (ಆ.29) ಅರ್ಚಕರ ಮಂತ್ರೋಚ್ಛಾರಣೆಯೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಗರಸಭಾ ಮಾಜಿ ಸದಸ್ಯ ಸಂತೋಷ್​ ಜತ್ತನ್​, ಗ್ರಾಮದ ಮುಖಂಡರಾದ ಅಣ್ಣಪ್ಪ ಸನಿಲ್​, ಜಗದೀಶ್​ ಶೆಟ್ಟಿ, ರಂಜನ್​ ಶೆಟ್ಟಿ, ನವೀನ್​ ಸನಿಲ್​, ಪ್ರಸಾದ್​ ಶೆಟ್ಟಿ, ಪ್ರಜ್ವಲ್​, ಅರವಿಂದ, ಅಶ್ವಿನ್​ ಕುಂದರ್​, ದಿನೇಶ್​ ಜತ್ತನ್​, ಸುರೇಂದ್ರ, ಅಂಗನವಾಡಿ ಶಿಕ್ಷಕಿ ರೇವತಿ, ಸುರೇಖಾ, ಜಯಶ್ರೀ ಇತರರು ಉಪಸ್ಥಿತರಿದ್ದರು.