ಉಡುಪಿ ತೆಂಕನಿಡಿಯೂರಿನ ಪ್ರೌಢಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಜಗದೀಶ್​ ಆರ್​. ಆಚಾರ್ಯ, ಸುಕನ್ಯಾ ಶೆಟ್ಟಿ, ವಿಜಯ್​ ಕೊಡವೂರು, ಆನಂದ್​, ವಿಜಯಪ್ರಕಾಶ್​ ಬೈಲಕೆರೆ, ಶರತ್​ ಬೈಲಕೆರೆ, ಗಾಯತ್ರಿ ಸುರೇಶ್​, ಕೃಷ್ಣ ಶೆಟ್ಟಿ, ಚರಣ್​ ರಾಜ್​, ರತ್ನಾಕರ್​ ಶೆಣೈ, ಎನ್​. ವಿಶ್ವನಾಥ್​ ಕರಬ, ಗಾಯತ್ರಿ ಎನ್​. ಇದ್ದರು. 
ಉಡುಪಿ

ವಿದ್ಯಾರ್ಥಿ ಸಂಘದಿಂದ ನಾಯಕತ್ವ ಗುಣ, ಆತ್ಮವಿಶ್ವಾಸ ಹೆಚ್ಚಳ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಭಿಪ್ರಾಯ

* ತೆಂಕನಿಡಿಯೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಗೃಹ ಉದ್ಘಾಟನೆ

ಉಡುಪಿ: ವಿದ್ಯಾರ್ಥಿ ಸಂಘವು ನಾಯಕತ್ವ ಗುಣ ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ. ಯಕ್ಷಶಿಕ್ಷಣ ಟ್ರಸ್ಟ್​ ಉಚಿತವಾಗಿ ನಡೆಸುವ ಯಕ್ಷಗಾನ ತರಬೇತಿಯ ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಕರಾವಳಿಯ ವಿಶಿಷ್ಟ ಕಲೆಯನ್ನು ಬೆಳೆಸಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಕರೆ ನೀಡಿದರು.
ಉಡುಪಿ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜ್​ನ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ (ಜು.24) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ. ಶ್ರೀಮತಿ ಪ್ರಕಾಶಿನಿ ಸ್ಮರಣಾರ್ಥ ಅವರ ಪತಿ ಆನಂದ್​ ನಿರ್ಮಿಸಿಕೊಟ್ಟ ಸೈಕಲ್​ ಸ್ಟ್ಯಾಂಡ್​ ಹಾಗೂ ಶೌಚಗೃಹ, ಯಕ್ಷ ಶಿಕ್ಷಣ ಟ್ರಸ್ಟ್​ ಸಹಕಾರದಲ್ಲಿ ಯಕ್ಷಗಾನ ತರಬೇತಿ ಮತ್ತು ಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್​ ಆರ್​. ಆಚಾರ್ಯ, ಗ್ರಾಪಂ ಮಾಜಿ ಅಧ್ಯೆ ಸುಕನ್ಯಾ ಶೆಟ್ಟಿ, ನಗರಸಭಾ ಮಾಜಿ ಸದಸ್ಯ ವಿಜಯ್​ ಕೊಡವೂರು, ದಾನಿ ಆನಂದ್​, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿಜಯಪ್ರಕಾಶ್​ ಬೈಲಕೆರೆ, ತಾಪಂ ಮಾಜಿ ಸದಸ್ಯ ಶರತ್​ ಬೈಲಕೆರೆ, ಗಾಯತ್ರಿ ಸುರೇಶ್​, ಕೃಷ್ಣ ಶೆಟ್ಟಿ, ಚರಣ್​ ರಾಜ್​, ಯಕ್ಷಗಾನ ಗುರುಗಳಾದ ರತ್ನಾಕರ್​ ಶೆಣೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್​. ವಿಶ್ವನಾಥ್​ ಕರಬ ಉಪಸ್ಥಿತರಿದ್ದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎನ್​. ಸ್ವಾಗತಿಸಿದರು. ಶಿಕ್ಷಕ ದಿವಾಕರ್​ ನಾಯಕ್​ ಕಾರ್ಯಕ್ರಮ ನಿರೂಪಿಸಿದರು.
"

ಸರ್ಕಾರಿ ಶಾಲೆಗಳ ಸಾಧನೆಯಲ್ಲಿ ದಾನಿಗಳ ಸಹಕಾರ ಮಹತ್ವದಾಗಿದೆ. ಶಾಲಾಭಿವೃದ್ಧಿ ಸಮಿತಿಯ ಬೇಡಿಕೆಯಂತೆ ಅನುದಾನ ಒದಗಿಸಿ 4 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿಮಾರ್ಣವಾಗಿದೆ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಪ್ರಕಾಶಿನಿ ಅವರ ಸ್ಮರಣಾರ್ಥ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್​ ಸ್ಟ್ಯಾಂಡ್​ ನಿರ್ಮಿಸುವ ಮೂಲಕ ಶಿಕ್ಷಣಕ್ಕೆ ವಿಶೇಷ ಸಹಕಾರ ನೀಡಿದ ಅವರ ಕುಟುಂಬ ಸದಸ್ಯರಿಗೆ ಶಾಸಕನ ನೆಲೆಯಲ್ಲಿ ಧನ್ಯವಾದ ಸಲ್ಲಿಸುತ್ತೇನೆ.

— ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.