ಉಡುಪಿಯಲ್ಲಿ ಆಯೋಜಿಸಿದ್ದ ಆರು ರಾಜ್ಯಗಳ ವಿಶೇಷ ಮಕ್ಕಳ ಪಾಲಕರ ಸಭೆಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಎಂ.ಜೆ. ಅರ್ಚನಾ, ಪುರುಷೋತ್ತಮ ಶೆಟ್ಟಿ, ಕೆ.ಎಸ್​. ಜೈವಿಠ್ಠಲ್​, ಡಾ. ಸುದೀಪ್​ ಗೋಯಲ್​, ಡಾ.ಉದಯ್​ ಶೆಟ್ಟಿ, ಬಿ.ಎಂ. ಭಟ್​, ವಿದ್ಯಾವಂತ ಆಚಾರ್ಯ, ರತ್ನಾ, ಡಾ. ಅರುಣ್​ ಮಯ್ಯ ಇತರರಿದ್ದರು. 
ಉಡುಪಿ

ಅಂಗವಿಕಲರಿಗೂ ಅಗತ್ಯ ಸಮಾಜದಲ್ಲಿ ಸಮಾನ ರೂಪ

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ

* ವಿಶೇಷಚೇತನ ಮಕ್ಕಳ ಪಾಲಕರ ಪ್ರಾದೇಶಿಕ ಸಭೆ

ಉಡುಪಿ: ವಿಶೇಷಚೇತನ ಮಕ್ಕಳನ್ನೂ ಸಹ ಮುಖ್ಯವಾಹಿನಿಗೆ ತಂದು ಸಮಾಜದ ಸಬಲೀಕರಣ ಮಾಡಬೇಕಿದೆ. ಹುಟ್ಟು ಉಚಿತ-ಸಾವು ಖಚಿತ ಆಗಿರುವುದರಿಂದ ಅಂಗವಿಕಲರಾಗಿ ಜನಿಸಿರುವ ಮಕ್ಕಳನ್ನೂ ಸಹ ಗೌರವಿಸುವ ವಾತಾವರಣ ನಿರ್ಮಾಣ ಆಗಬೇಕಿದೆ. ಅವರಿಗೂ ಸಹ ಸಮಾಜದಲ್ಲಿ ಸಮಾನ ರೂಪ ಕೊಡಬೇಕಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಶಾರದಾ ರೆಸಿಡೆನ್ಶಿಯಲ್​ ಸ್ಕೂಲ್​ನ ಸಭಾಭವನದಲ್ಲಿ ಮಾಹೆ ವಿವಿ ಅಧೀನದ ಆಸರೆ ಅರ್ಚನಾ ಟ್ರಸ್ಟ್​ ವತಿಯಿಂದ ಶನಿವಾರ ಆಯೋಜಿಸಿದ್ದ ಕರ್ನಾಟಕ, ಕೇರಳ, ತೆಲಂಗಾಣ, ಗೋವಾ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿಶೇಷ ಮಕ್ಕಳ ಪಾಲಕರ ಎರಡು ದಿನಗಳ 97ನೇ ಪ್ರಾದೇಶಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಸನ್ಮಾನ
ಮಣಿಪಾಲದ ಶಿವಳ್ಳಿಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ವಿಶೇಷ ಮಕ್ಕಳಿಗಾಗಿ ನಿರ್ಮಿಸಿರುವ ಕೌಶಲ ತರಬೇತಿ ಕೇಂದ್ರಕ್ಕೆ ಕೊಡುಗೆ ನೀಡಿದ ಉಜ್ವಲ್​ ಡೆವೆಲಪರ್ಸ್​ ಆ್ಯಂಡ್​ ಕನಸ್ಟ್ರಕ್ಷನ್​ನ ಮಾಲೀಕ ಪುರುಷೋತ್ತಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ರತ್ನಾ ಮಾತನಾಡಿದರು. ಜಿಪಂ ಸಿಪಿಒ ಡಾ.ಉದಯ್​ ಶೆಟ್ಟಿ, ಜಿಲ್ಲಾ ಗವರ್ನರ್​ ರೊ. ಬಿ.ಎಂ. ಭಟ್​, ಶಾರದಾ ರೆಸಿಡೆನ್ಶಿಯಲ್​ ಸ್ಕೂಲ್​ನ ನಿರ್ದೇಶಕ ವಿದ್ಯಾವಂತ ಆಚಾರ್ಯ, ಮಾಹೆಯ ಎಂಸಿಎಚ್​ಪಿಯ ಪ್ರೊೆಸರ್​ ಆ್ಯಂಡ್​ ಡೀನ್​ ಡಾ. ಅರುಣ್​ ಮಯ್ಯ ಉಪಸ್ಥಿತರಿದ್ದರು.
ಉಜ್ವಲ್​ ಡೆವೆಲಪರ್ಸ್​ ಆ್ಯಂಡ್​ ಕನಸ್ಟ್ರಕ್ಷನ್​ನ ಮಾಲೀಕ ಪುರುಷೋತ್ತಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಎಂ.ಜೆ. ಅರ್ಚನಾ ಅವರು ಪ್ರಾರ್ಥನಾ ನೃತ್ಯ ಮಾಡಿದರು. ಸಂಘಟನಾ ಸಮಿತಿ ಸದಸ್ಯ ಕೆ.ಎಸ್​. ಜೈವಿಠ್ಠಲ್​ ಸ್ವಾಗತಿಸಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಸುದೀಪ್​ ಗೋಯಲ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್​ ನಾಯ್ಕ್​ ಕಾರ್ಯಕ್ರಮ ನಿರೂಪಿಸಿದರು. ಅರ್ಚನಾ ಟ್ರಸ್ಟ್​ನ ಟ್ರಸ್ಟಿ ಡಾ. ಪದ್ಮರಾಜ್​ ಹೆಗ್ಡೆ ವಂದಿಸಿದರು. ವಿಶೇಷ ಮಕ್ಕಳು ತಯಾರಿಸಿದ ವಿವಿಧ ಕರಕುಶಲ ವಸ್ತಗಳ ಪ್ರದರ್ಶನ ಗಮನ ಸೆಳೆಯಿತು.