ಉಡುಪಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಟೆಕ್ವಾಂಡೋ ಪಂದ್ಯಾವಳಿಯನ್ನು ಯಶ್ಪಾಲ್ ಸುವರ್ಣ -ಉದ್ಘಾಟಿಸಿದರು. ವಾದಿರಾಜ ರಾವ್, ಶ್ರೀಪಾದ್ ಆರ್. ರಾವ್, ರಮ್ಯಾ ವಿ., ಡಾ.ಜಗದೀಶ್ ಗಸ್ತಿ, ಸುಭಾಷ್ ಸಾಲ್ಯಾನ್, ಟಿಎಂಜೆಎಫ್ ಲಯನ್ ಸುರೇಶ್ ಪ್ರಭು, ಹರೀಶ್, ಸಂತೋಷ್ ನಾಯಕ್ ಇತರರಿದ್ದರು.
* ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟನೆ
* 350ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿ
ಉಡುಪಿ: ಕರ್ನಾಟಕ ಟೇಕ್ವಾಂಡೋ, ಯಕ್ಷಿತ್ ಯುವ ಫೌಂಡೇಷನ್ ಸಹಕಾರದಲ್ಲಿ ಉಡುಪಿ ಜಿಲ್ಲಾ ಟೆಕ್ವಾಂಡೋ ಸಂಸ್ಥೆ ವತಿಯಿಂದ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಬ್ ಜೂನಿಯರ್, ಕ್ಯಾಡೆಟ್, ಜೂನಿಯರ್ ಮತ್ತು ಸೀನಿಯರ್ ವಿಭಾಗದ 2ನೇ ಆವೃತ್ತಿಯ "ಕರಾವಳಿ ಟೇಕ್ವಾಂಡೋ ಚಾಂಪಿಯನ್ ಶಿಪ್-2026'ಅನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಗೌರವಾಧ್ಯಕ್ಷ ವಾದಿರಾಜ ರಾವ್, ಯಕ್ಷಿತ್ ಯುವ ಫೌಂಡೇಷನ್ ಅಧ್ಯಕ್ಷ ಶ್ರೀಪಾದ್ ಆರ್. ರಾವ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷೆ ರಮ್ಯಾ ವಿ. ಅಧ್ಯಕ್ಷತೆ ವಹಿಸಿದ್ದರು.
ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾರೀರಿಕ ಶಿಕ್ಷಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಡಾ.ಜಗದೀಶ್ ಗಸ್ತಿ, ಓಪುಲಾ ಸಾಫ್ಟ್ ವೇರ್ನ ಸಿಇಒ ಸುಭಾಷ್ ಸಾಲ್ಯಾನ್, ಡಿಸ್ಟ್ರಿಕ್ 317ಸಿ ಜಿಲ್ಲಾ ಮಾಜಿ ಗವರ್ನರ್ ಟಿಎಂಜೆಎಫ್ ಲಯನ್ ಸುರೇಶ್ ಪ್ರಭು, ಹರೀಶ್, ಸಂತೋಷ್ ನಾಯಕ್, ಕರ್ನಾಟಕ ಟೇಕ್ವಾಂಡೋ ಸಂಸ್ಥೆಯ ಉಪಾಧ್ಯಕ್ಷ ವಿಶ್ವಕರ್ಮ ಆಚಾರ್ಯ (ಸ್ವಾಮಿ), ಉಡುಪಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಸಂಸ್ಥಾಪಕ ರಾಜಶೇಖರ ಕೆ.ಪಿ. ಇದ್ದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 350ಕ್ಕೂ ಅಧಿಕ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಅಕ್ಷಯ್ ಹೆಗಡೆ ಮತ್ತು ಗೀತಾ ವಾದಿರಾಜ ರಾವ್ ಕಾರ್ಯಕ್ರಮ ನಿರ್ವಹಿಸಿದರು.