ಉಡುಪಿಯ ಕಲ್ಮಾಡಿ ವಾರ್ಡ್ನಲ್ಲಿ ನಿರ್ಮಾಣಗೊಂಡ ಸಂಪರ್ಕ ರಸ್ತೆಯನ್ನು ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಪ್ರಭಾಕರ್ ಪೂಜಾರಿ, ಸುಂದರ್ ಜೆ. ಕಲ್ಮಾಡಿ, ಮಾಧವ್ ಗುರಿಕಾರ, ಜಯರಾಮ್ ಕಲ್ಮಾಡಿ, ರಮೇಶ್ ಮಾಸ್ಟರ್ ಕಲ್ಮಾಡಿ, ಜಯಶ್ರೀ ಅಶೋಕ್ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭರವಸೆ
* ಬಬ್ಬುಸ್ವಾಮಿ ದೈವಸ್ಥಾನ ಸಂಪರ್ಕ ರಸ್ತೆ ಉದ್ಘಾಟನೆ
ಉಡುಪಿ: ಕಳೆದ ಬಾರಿ ಬಬ್ಬುಸ್ವಾಮಿ ದೈವಸ್ಥಾನದ ಸಮಗ್ರ ಜೀರ್ಣೋದ್ಧಾರದ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರ ಮನವಿಯಂತೆ 13 ಲಕ್ಷ ರೂ. ವೆಚ್ಚದಲ್ಲಿ ಸಂಪರ್ಕ ರಸ್ತೆ ಸೌಕರ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಕಲ್ಮಾಡಿ ವಾರ್ಡ್ನ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಲಾಗುವುದು ಎಂದು ಶಾಸಕ ಯಶ್ಪಾಲ್ ಸುವರ್ಣ ಭರವಸೆ ನೀಡಿದರು.
ಉಡುಪಿ ನಗರಸಭೆಯ ಕಲ್ಮಾಡಿ ವಾರ್ಡ್ನಲ್ಲಿ ಸುಮಾರು 13 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಲ್ಮಾಡಿಪಾದೆ ಬಬ್ಬುಸ್ವಾಮಿ ದೈವಸ್ಥಾನ ಸಂಪರ್ಕ ರಸ್ತೆ ಉದ್ಘಾಟಿಸಿ ಮಾತನಾಡಿದರು.
ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸುಂದರ್ ಜೆ. ಕಲ್ಮಾಡಿ, ಮಾಧವ್ ಗುರಿಕಾರ, ಪ್ರಮುಖರಾದ ಜಯರಾಮ್ ಕಲ್ಮಾಡಿ, ರಮೇಶ್ ಮಾಸ್ಟರ್ ಕಲ್ಮಾಡಿ, ಜಯಶ್ರೀ ಅಶೋಕ್, ಸುರೇಶ್ ಕಲ್ಮಾಡಿ, ರೋಹಿತ್ ಕಲ್ಮಾಡಿ, ಅಶೋಕ್ ಸುವರ್ಣ, ವಿನೋದ್, ಮನೋಜಕುಮಾರ್ ಕಲ್ಮಾಡಿ, ಕಿಶೋರ್ ಮಲ್ಪೆ, ಸ್ಥಳೀಯ ಮುಖಂಡರಾದ ಲಕ್ಷ್ಮೀಶ, ವಿವೇಕ್ ಇನ್ನಿತರರು ಉಪಸ್ಥಿತರಿದ್ದರು.