ಉಡುಪಿಯ ಕಲ್ಯಾಣಪುರ-ನಿಡಂಬಳ್ಳಿ ಮಾರ್ಗದಲ್ಲಿ ಅಭಿವೃದ್ಧಿ ಪಡಿಸಿದ ರಸ್ತೆಯನ್ನು ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ನಾಗರಾಜ್ ಕುಂದರ್, ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್, ಸುನೀತಾ ಪೂಜಾರಿ, ಸದಸ್ಯರಾದ ಪ್ರೇಮಲತಾ ಕಿಶೋರ್, ಉದಯ ಕುಮಾರ್, ನವೀನ್ ಕಾಂಚನ್, ವಿಶು ಕುಮಾರ್, ಅನಿತಾ ನಾಯ್ಕ್, ರತ್ನಾ ಉಚ್ಚಿಲ, ಕವಿತಾ ಮೇಸ್ತ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭರವಸೆ
* ನಿಡಂಬಳ್ಳಿ ಮಾರ್ಗದ ರಸ್ತೆ ಉದ್ಘಾಟನೆ
ಉಡುಪಿ: ಕಲ್ಯಾಣಪುರ&ನಿಡಂಬಳ್ಳಿ ಭಾಗದಲ್ಲಿ ಹಲವು ವರ್ಷದಿಂದ ರಸ್ತೆ ತೀವ್ರ ಹದಗೆಟ್ಟು ಸಂಚಾರಕ್ಕೆ ಸಮಸ್ಯೆಯಾಗಿತ್ತು. ಇಲ್ಲಿನ ಜನರ ಬೇಡಿಕೆಯಂತೆ ಅನುದಾನ ಒದಗಿಸಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಸರ್ಕಾರದ ಸೀಮಿತ ಅನುದಾನದ ನಡುವೆಯೂ ಗ್ರಾಮದ ರಸ್ತೆಗಳಿಗೆ ಗರಿಷ್ಠ ಮೊತ್ತ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಕಲ್ಯಾಣಪುರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಶಾಸಕ ಯಶ್ಪಾಲ್ ಸುವರ್ಣ ಭರವಸೆ ನೀಡಿದರು.
ಉಡುಪಿ ಕಲ್ಯಾಣಪುರ ಗ್ರಾಪಂ ವ್ಯಾಪ್ತಿಯ ವಾಲ್ಟರ್ ನಜರೆತ್ ಮನೆಯಿಂದ ನಿಡಂಬಳ್ಳಿ ನಾಗೇಶ್ ಸಾಲ್ಯಾನ್ ಮನೆಯವರೆಗೆ ಸುಮಾರು 1.40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿರುವ ರಸ್ತೆಯನ್ನು ಮಂಗಳವಾರ (ಜು.28) ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣಪುರ ಗ್ರಾಪಂ ಮಾಜಿ ಅಧ್ಯಕ್ಷರಾದ ನಾಗರಾಜ್ ಕುಂದರ್, ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್, ಸುನೀತಾ ಪೂಜಾರಿ, ಸದಸ್ಯರಾದ ಪ್ರೇಮಲತಾ ಕಿಶೋರ್, ಉದಯ ಕುಮಾರ್, ನವೀನ್ ಕಾಂಚನ್, ವಿಶು ಕುಮಾರ್, ಅನಿತಾ ನಾಯ್ಕ್, ರತ್ನಾ ಉಚ್ಚಿಲ, ಕವಿತಾ ಮೇಸ್ತ, ಬೆನೆಡಿಕ್ಟ್ ಮೆನೇಜಸ್, ಜಯಂತಿ ಕಾವೇರಿಜಿಡ್ಡ, ಬಿಲ್ಲವ ಒಕ್ಕೂಟದ ಅಧ್ಯಕ್ಷ ಹರೀಶ್ ಕುಮಾರ್, ತೋನ್ಸೆ ಗರಡಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಜತ್ತನ್, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಅಜಿತ್ ಕೊಡವೂರು, ನಗರ ಅಧ್ಯಕ್ಷ ಸುನೀಲ್ ನೇಜಾರು, ಪ್ರಮುಖರಾದ ಅಪ್ಪು ಜತ್ತನ್, ಕಿಶೋರ್, ದಿನಕರ್ ಶೆಟ್ಟಿ, ಶರತ್ ಕುಮಾರ್, ದಿನಕರ್ ಮಾಸ್ಟರ್, ಶರತ್ ಕಲ್ಯಾಣಪುರ, ರವಿ ಕರ್ಕೇರ, ಕೇಶವ್ ಉಚ್ಚಿಲ, ಸುಧೀರ್ ಪೂಜಾರಿ ಇತರರಿದ್ದರು.