ಉಡುಪಿಯ ಕಿದಿಯೂರು-ಸಂಪಿಗೆನಗರ ಮುಖ್ಯ ರಸ್ತೆಯನ್ನು ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಉದಯಕುಮಾರ್ ಶೆಟ್ಟಿ ಕಿದಿಯೂರು, ಜಗದೀಶ್ ಆಚಾರ್ಯ ಕಪ್ಪೆಟ್ಟು, ವೆಂಕಟರಮಣ ಕಿದಿಯೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಗಿರೀಶ್ ಅಮೀನ್, ಅಶೋಕ್ ಪಾಲನ್, ಪ್ರಶಾಂತ್ ಸಾಲ್ಯಾನ್, ವಿನೋದಿನಿ, ಮಾಲತಿ, ವಿದ್ಯಾ, ದೀಪಾ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭರವಸೆ
* ಕಿದಿಯೂರು-ಸಂಪಿಗೆನಗರ ರೋಡ್ ಉದ್ಘಾಟನೆ
ಉಡುಪಿ: ಉದ್ಯಾವರ ಭಾಗದಿಂದ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಮಲ್ಪೆ ಸಂಪರ್ಕಿಸುವ ಮುಖ್ಯರಸ್ತೆಯ ಅಭಿವೃದ್ಧಿ ಮಾಡಲಾಗಿದೆ. ದಿನಂಪ್ರತಿ ಸಂಚರಿಸುವ ಸಾವಿರಾರು ವಾಹನ ಹಾಗೂ ಜನರಿಗೆ ಇದರಿಂದ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಇತರ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತೇನೆ ಎಂದು ಶಾಸಕ ಯಶ್ಪಾಲ್ ಸುವರ್ಣ ಭರವಸೆ ನೀಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಅಂಬಲಪಾಡಿ, ಕಡೆಕಾರು, ಉದ್ಯಾವರ ಗ್ರಾಮ ಸಂಪರ್ಕಿಸುವ ಬಂಕೇರಕಟ್ಟ ಸೇತುವೆಯಿಂದ ಸಂಪಿಗೆನಗರದ ವರೆಗೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕಿದಿಯೂರು-ಸಂಪಿಗೆನಗರ ಮುಖ್ಯ ರಸ್ತೆಯನ್ನು ಸೋಮವಾರ (ಮೇ 18) ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಮುಖಂಡರಾದ ಉದಯಕುಮಾರ್ ಶೆಟ್ಟಿ ಕಿದಿಯೂರು, ಜಗದೀಶ್ ಆಚಾರ್ಯ ಕಪ್ಪೆಟ್ಟು, ವೆಂಕಟರಮಣ ಕಿದಿಯೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಗಿರೀಶ್ ಅಮೀನ್, ಅಶೋಕ್ ಪಾಲನ್, ಪ್ರಶಾಂತ್ ಸಾಲ್ಯಾನ್, ಜಯಕರ್ ಸನಿಲ್, ರಾಜೇಂದ್ರ ಪಂದುಬೆಟ್ಟು, ರಘುನಾಥ್ ಕೋಟ್ಯಾನ್, ಪ್ರದೀಪ್ಚಂದ್ರ ಗಾಣಿಗ, ಪ್ರಮೋದ್ ಸಾಲ್ಯಾನ್, ಸುನೀಲ್ ಕಪ್ಪೆಟ್ಟು, ಸೋಮನಾಥ ಬಿ.ಕೆ., ರಾಜೇಶ್ ಸುವರ್ಣ, ಹರೀಶ್ ಪಾಲನ್, ಸುಂದರ್ ಪೂಜಾರಿ, ಶಶಿಧರ್ ಸುವರ್ಣ, ವಿನೋದಿನಿ, ಮಾಲತಿ, ವಿದ್ಯಾ, ದೀಪಾ, ಅರುಣ್, ದೀಪಕ್ ಪುತ್ರನ್, ರಾಕೇಶ್ ಜತ್ತನ್, ಕಿಶೋರಕುಮಾರ್, ಹರೀಶ್ ಸುವರ್ಣ, ರಮೇಶ್ ಆಚಾರ್ಯ, ಕಿರಣ್, ಗೌತಮ್, ವಿಕಾಸ್, ವಿಜಯ ಭಟ್ ಇತರರು ಉಪಸ್ಥಿತರಿದ್ದರು.