ಉಡುಪಿ ನಗರಸಭೆಯ ಕಲ್ಮಾಡಿ ವಾರ್ಡ್ನಲ್ಲಿ ಅಭಿವೃದ್ಧಿಗೊಂಡ ಕೆರೆಯನ್ನು ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಪ್ರಭಾಕರ್ ಪೂಜಾರಿ, ಸುಂದರ್ ಜೆ. ಕಲ್ಮಾಡಿ, ಬಾಲಕೃಷ್ಣ ಶೆಟ್ಟಿ, ವಿನಯಕುಮಾರ್, ವಿವೇಕ್, ವಿನೋದ್ ಹೊಸಕಟ್ಟ, ಲಕ್ಷ್ಮೀಶ್ ಬಂಗೇರ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾಹಿತಿ
* ಅಭಿವೃದ್ಧಿಗೊಂಡ ಕೆರೆಯ ಉದ್ಘಾಟನೆ
ಉಡುಪಿ: ಕಲ್ಮಾಡಿ ಗರಡಿ ಬಳಿಯಲ್ಲಿರುವ ಕೆರೆ ಅಭಿವೃದ್ಧಿ ಮಾಡುವ ಸ್ಥಳೀಯರ ಬೇಡಿಕೆ ಹಿನ್ನೆಲೆಯಲ್ಲಿ ನಗರಸಭೆಯ ಮೂಲಕ ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಕಲ್ಮಾಡಿ ವಾರ್ಡ್ಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಗರಿಷ್ಠ ಅನುದಾನ ಒದಗಿಸಿದ್ದು, ಶೀಘ್ರದಲ್ಲಿಯೇ 5 ಕೋಟಿ ರೂ. ವೆಚ್ಚದಲ್ಲಿ ಕಲ್ಮಾಡಿ-ಬಂಕೇರಕಟ್ಟ ಹೊಸ ಸೇತುವೆಯ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಉಡುಪಿ ನಗರಸಭೆಯ ಕಲ್ಮಾಡಿ ವಾರ್ಡ್ನ ಗರಡಿ ಬಳಿ 35 ಲಕ್ಷ ರೂ. ವೆಚ್ಚದ ಕಾಮಗಾರಿಯಿಂದ ಅಭಿವೃದ್ಧಿಗೊಂಡ ಕೆರೆಗೆ ರಾಭಿಶೇಕ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಾಜಿ ಸದಸ್ಯರಾದ ಸುಂದರ್ ಜೆ. ಕಲ್ಮಾಡಿ, ಬಾಲಕೃಷ್ಣ ಶೆಟ್ಟಿ, ಸ್ಥಳೀಯ ಮುಖಂಡರಾದ ವಿನಯಕುಮಾರ್, ವಿವೇಕ್, ವಿನೋದ್ ಹೊಸಕಟ್ಟ, ಲಕ್ಷ್ಮೀಶ್ ಬಂಗೇರ, ಮನೋಜಕುಮಾರ್, ಸಚಿನ್, ನಿತಿನ್, ರಾಘವ್ ಪೂಜಾರಿ, ರತ್ನಾಕರ್ ಸಾಲ್ಯಾನ್, ರಮೇಶ್ ಮಾಸ್ಟರ್, ರೋಹಿತ್ ಬೊಟ್ಟಲ, ಗೋವಿಂದ ಗುರಿಕಾರ, ಸಾಧು ಪೂಜಾರಿ, ಗಿರೀಶ್ ಕಲ್ಮಾಡಿ, ಚಂದ್ರಕಾಂತ್ ಕಲ್ಮಾಡಿ, ಯಶೋದಾ ಕಲ್ಮಾಡಿ, ಜಯಶ್ರೀ, ಸುಶೀಲಾ ಇನ್ನಿತರರು ಉಪಸ್ಥಿತರಿದ್ದರು.