ಉಡುಪಿಯಲ್ಲಿ ಆಯೋಜಿಸಿದ್ದ ಬಿಎಲ್​ಎ-2 ಪ್ರತಿನಿಧಿಗಳ ಕಾರ್ಯಾಗಾರವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಕುತ್ಯಾರು ನವೀನ್​ ಶೆಟ್ಟಿ, ಡಾ. ಧನಂಜಯ ಸರ್ಜಿ, ದಿನಕರ್​ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಕಿರಣಕುಮಾರ್​ ಬೈಲೂರು, ಜಗದೀಶ್​ ಆಚಾರ್ಯ ಕಪ್ಪೆಟ್ಟು, ರಾಜೀವ ಕುಲಾಲ್​ ಇದ್ದರು. 
ಉಡುಪಿ

ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬುವ ಎಸ್​ಐಆರ್​

* ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ

* ಬಿಎಲ್​ಎ-2 ಪ್ರತಿನಿಧಿಗಳ ಕಾರ್ಯಾಗಾರ

ಉಡುಪಿ: ಭಾರತದಲ್ಲಿ 23 ವರ್ಷದ ಬಳಿಕ ದೇಶಾದ್ಯಂತ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್​ಐಆರ್​) ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಈ ಪ್ರಕ್ರಿಯೆಯು ಅನರ್ಹ ಹಾಗೂ ಅಕ್ರಮ ಮತದಾರರ ಹೆಸರನ್ನು ಮತದಾರ ಪಟ್ಟಿಯಿಂದ ತೆರವು ಮಾಡಲಾಗುತ್ತಿದೆ. ಪಾರದರ್ಶಕ ಚುನಾವಣೆ ನಡೆಸಿ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಅಕ್ರಮ ವಲಸಿಗರನ್ನು ಮಟ್ಟ ಹಾಕಲು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬಲು ಇದು ಸಹಕಾರಿಯಾಗಲಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಕುಂಜಿಬೆಟ್ಟುನಲ್ಲಿರುವ ಶಾರದಾ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಉಡುಪಿ ವಿಧಾನಸಭಾ ಕ್ಷೇತ್ರದ ಬಿಎಲ್​ಎ-2 ಪ್ರತಿನಿಧಿಗಳ ಕಾರ್ಯಾಗಾರ ಉದ್ಘಾಟಿಸಿ  ಮಾತನಾಡಿದರು.

ಬದ್ಧತೆಯಿಂದ ಶ್ರಮಿಸಿ

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಮಾತನಾಡಿ, ಈ ನಿಯಮದನ್ವಯ ಚುನಾವಣಾ ಪೂರ್ವದಲ್ಲಿ ಅರ್ಹ ಮತದಾರದ ಹೆಸರನ್ನು ನಿಗದಿತ ದಾಖಲೆಗಳೊಂದಿಗೆ ಮರು ನೋಂದಾಯಿಸುವ ಪ್ರಕ್ರಿಯೆ ನಡೆಯಲಿದೆ. ಈ ಕುರಿತು ಕಾರ್ಯಾಗಾರದಲ್ಲಿ ನೀಡುವ ಉಪಯುಕ್ತ ಮಾಹಿತಿಯನ್ನು ಪ್ರತಿ ಮನೆಗಳಿಗೆ ತಲುಪಿಸಬೇಕು. ಆಯಾ ಪ್ರದೇಶದ ಬಿಎಲ್​ಎ-2 ಜತೆ ಸಮನ್ವಯದೊಂದಿಗೆ ಎಲ್ಲ ಅರ್ಹ ಮತದಾರರ ಹೆಸರು ಸೇರ್ಪಡೆಗೆ ಬದ್ಧತೆಯಿಂದ ಶ್ರಮಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್​ ಸದಸ್ಯ ಡಾ. ಧನಂಜಯ ಸರ್ಜಿ, ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಮಾಹಿತಿ ನೀಡಿದರು. ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್​ ಅಮೀನ್​ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಉಡುಪಿ ನಗರ ಮಂಡಲ ಉಸ್ತುವಾರಿ ದಿನಕರ್​ ಶೆಟ್ಟಿ ಹೆರ್ಗ, ಉಡುಪಿ ಗ್ರಾಮಾಂತರ ಮಂಡಲ ಉಸ್ತುವಾರಿ ರೇಷ್ಮಾ ಉದಯ ಶೆಟ್ಟಿ, ಉಡುಪಿ ಗ್ರಾಮಾಂತರ ಮಂಡಲ ಪ್ರಭಾರಿ ಕಿರಣಕುಮಾರ್​ ಬೈಲೂರು, ಉಡುಪಿ ವಿಧಾನಸಭಾ ಕ್ಷೇತ್ರದ ಬಿಎಲ್​ಎ-1 ಜಗದೀಶ್​ ಆಚಾರ್ಯ ಕಪ್ಪೆಟ್ಟು ಸಹಿತ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಎಲ್​ಎ-2ಗಳು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಉಡುಪಿ ಗ್ರಾಮಾಂತರ ಅಧ್ಯಕ್ಷ ರಾಜೀವ ಕುಲಾಲ್​ ಸ್ವಾಗತಿಸಿದರು. ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಮನೋಜ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ ವಂದಿಸಿದರು.