ಉಡುಪಿ ಮಲ್ಪೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಯಶ್ಪಾಲ್ ಸುವರ್ಣ ಮಾತನಾಡಿದರು. ನಾರಾಯಣ ಕರ್ಕೇರ, ಸುಂದರ್ ಸಾಲ್ಯಾನ್, ಕುಮಾರ್ ಖಾರ್ವಿ, ಯಶವಂತ್ ಖಾರ್ವಿ, ದಿನೇಶ್ ಪುತ್ರನ್, ಸವಿತಾ ಖಾದ್ರಿ, ಮುರಳೀಧರ್, ಹರ್ದೇವ್ ಸಿಂಗ್, ರಾಮಚಂದ್ರ ಕುಂದರ್ ಇದ್ದರು.
* ಉಡುಪಿ ಶಾಶಕ ಯಶ್ಪಾಲ್ ಸುವರ್ಣ ಅಭಿಪ್ರಾಯ
* ಮಲ್ಪೆಯಲ್ಲಿ ಮಾಹಿತಿ ಕಾರ್ಯಾಗಾರ ಉದ್ಘಾಟನೆ
ಉಡುಪಿ: ಮೀನುಗಾರಿಕಾ ಸಂದರ್ಭದಲ್ಲಿ ಇಂಧನ ವೆಚ್ಚ ಕಡಿಮೆ ಮಾಡಲು ಹಾಗೂ ಸೀಮೆಎಣ್ಣೆಗೆ ಪರ್ಯಾಯವಾಗಿ ಹೊಸ ವಿಧಾನ ಅಳವಡಿಸಿಕೊಳ್ಳಬೇಕಿದೆ. ಭವಿಷ್ಯದ ಮೀನುಗಾರಿಕೆಯ ದೃಷ್ಟಿಯಿಂದ ಮೀನುಗಾರಿಕಾ ನಾಡದೋಣಿಗಳಿಗೆ ಎಲ್ಪಿಜಿ ಆಧಾರಿತ ಔಟ್ ಬೋರ್ಡ್ ಇಂಜಿನ್ ಬಳಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಭಿಪ್ರಾಯಪಟ್ಟರು.
ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ವತಿಯಿಂದ ನಾಡದೋಣಿ ಮೀನುಗಾರಿಕೆ ಬಳಕೆಯ ಎಲ್ಪಿಜಿ ಆಧಾರಿತ ಔಟ್ ಬೋರ್ಡ್ ಇಂಜಿನ್ ಬಳಕೆಯ ಕುರಿತು ಶನಿವಾರ (ಜು.25) ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಭೆಯಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ, ಮಲ್ಪೆ ನಾಡದೋಣಿ ಸಹಕಾರಿ ಸಂಘದ ಅಧ್ಯಕ್ಷ ಸುಂದರ್ ಸಾಲ್ಯಾನ್, ನಾಡದೋಣಿ ಮೀನುಗಾರರ ಬೈಂದೂರು ವಲಯದ ಅಧ್ಯಕ್ಷ ಕುಮಾರ್ ಖಾರ್ವಿ, ಗಂಗೊಳ್ಳಿ ವಲಯದ ಯಶವಂತ್ ಖಾರ್ವಿ, ಬೇಸಿಗೆ ನಾಡದೋಣಿ ಸಂಘದ ಅಧ್ಯಕ್ಷ ಕೃಷ್ಣ, ಇಂಡೇನ್ ಗ್ಯಾಸ್ ಏಜೆನ್ಸಿಯ ದಿನೇಶ್ ಪುತ್ರನ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಸವಿತಾ ಖಾದ್ರಿ, ವನಾಜ್ ಇಂಜಿನಿಯರಿಂಗ್ ಪುಣೆಯ ಅಧಿಕಾರಿ ಮುರಳೀಧರ್, ಐಒಸಿಎಲ್ ಸಂಸ್ಥೆಯ ಹರ್ದೇವ್ ಸಿಂಗ್ ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.
ಮೀನು ಮಾರಾಟ ಫೆಡರೇಷನ್ನ ನಿರ್ದೇಶಕ ರಾಮಚಂದ್ರ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಮಟ್ಟು ಯತೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಎಲ್ಪಿಜಿ ಕಿಟ್ ಅಳವಡಿಕೆಗೆ ಪ್ರಧಾಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಬ್ಸಿಡಿ ನೀಡುವಂತೆ ಕೇಂದ್ರ ಮೀನುಗಾರಿಕಾ ಹಾಗೂ ಪೆಟ್ರೋಲಿಯಂ ಸಚಿವರನ್ನು ಶೀಘ್ರದಲ್ಲೇ ಭೇಟಿಯಾಗಿ ಮನವಿ ಮಾಡಲಿದ್ದೇನೆ. ರಾಜ್ಯ ಸರ್ಕಾರವೂ ಸಹ ಈ ಬಗ್ಗೆ ಸಹಕಾರ ನೀಡುವಂತೆ ಮುಖ್ಯಮಂತ್ರಿಗೆ ನಾಡದೋಣಿ ಮೀನುಗಾರರ ಪರವಾಗಿ ವಿನಂತಿಸಲಾಗುವುದು.
— ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.