ಉಡುಪಿಯ ವೈಕುಂಠ ಬಾಳಿಗಾ ಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರಿಕೆಟ್​ ಪಂದ್ಯಾಟವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಡಾ.ಕೃಷ್ಣ ಪ್ರಸಾದ ಕೂಡ್ಲು, ಶ್ರೀನಿಧಿ ಹೆಗ್ಡೆ, ಅಜಯ್​ ಪಿ. ಶೆಟ್ಟಿ, ಸುರೇಖಾ, ಶ್ರೀವತ್ಸ ಗಾವಸ್ಕರ್​ ಇದ್ದರು. 
ಉಡುಪಿ

ಕ್ರಿಕೆಟ್​ ಸ್ಟೇಡಿಯಂ ನಿರ್ಮಾಣಕ್ಕೆ ಯತ್ನ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ

*  ವೈಕುಂಠ ಬಾಳಿಗಾ ಲಾ ಕಾಲೇಜಿನಲ್ಲಿ ಪಂದ್ಯಾಟ ಉದ್ಘಾಟನೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ಜಿಲ್ಲೆಗೊಂದು ಕ್ರಿಕೆಟ್​ ಸ್ಟೇಡಿಯಂ ಬೇಕು ಎನ್ನುವುದು ಇಲ್ಲಿನ ಕ್ರಿಕೆಟ್​ ಆಟಗಾರರ ಬಹುದಿನದ ಕನಸು. ಅದನ್ನು ನನಸು ಮಾಡುವ ಪ್ರಯತ್ನ ನಡೆದಿದೆ. ಸುಸಜ್ಜಿತ ಕ್ರಿಕೆಟ್​ ಸ್ಟೇಡಿಯಂ ನಿರ್ಮಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತೇನೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಭರವಸೆ ನೀಡಿದರು.
ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ವಿಪಿಎಲ್​-2 ಕ್ರಿಕೆಟ್​ ಟೂರ್ನಮೆಂಟ್​ ಉದ್ಘಾಟಿಸಿ ಮಾತನಾಡಿದರು.
ಉಡುಪಿಯ ಪ್ರಸಾದ ನೇತ್ರಾಲಯದ ನಿರ್ದೇಶಕ ಡಾ.ಕೃಷ್ಣ ಪ್ರಸಾದ ಕೂಡ್ಲು, ವಕೀಲ ಶ್ರೀನಿಧಿ ಹೆಗ್ಡೆ, ಉದ್ಯಮಿ ಅಜಯ್​ ಪಿ. ಶೆಟ್ಟಿ ಮಾತನಾಡಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ ಸುರೇಖಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್​ ಡಿ. ರಾವ್​, ಕ್ರೀಡಾ ಕಾರ್ಯದರ್ಶಿಗಳಾದ ಕಾರ್ತಿಕ್​ ಹೆಬ್ರಿ, ನಿಶ್ಚಿತಾ ಉಪಸ್ಥಿತರಿದ್ದರು.
ಕಾಲೇಜಿನ ಅಧ್ಯಕ್ಷರಾದ ಶ್ರೀವತ್ಸ ಗಾವಸ್ಕರ್​ ಸ್ವಾಗತಿಸಿದರು. ಶಮಂತ್​ ವಂದಿಸಿದರು. ವಿದ್ಯಾರ್ಥಿ ದೀಪಕ್​ ಕಾಮತ್​ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.