ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ನಿರ್ಮಾಣಗೊಂಡ ಕಾಂಕ್ರೀಟ್​ ರಸ್ತೆಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಶರತ್​ ಬೈಲಕೆರೆ, ವಿಜಯ ಪ್ರಕಾಶ್​, ವಿನೋದ್​ ಸುವರ್ಣ, ಚರಣರಾಜ್​, ಅರುಣ್​ ಜತ್ತನ್​, ಸತೀಶ್​ ಬೈಲಕೆರೆ, ಕೃಷ್ಣ ಶೆಟ್ಟಿ, ಗಾಯತ್ರಿ, ಮಾಲಿನಿ ಜತ್ತನ್​, ಶಾಲಿನಿ, ಪುಷ್ಪಾ ಇತರರಿದ್ದರು. 
ಉಡುಪಿ

ಗ್ರಾಮಗಳಿಗೆ ಸೌಕರ್ಯ ಕಲ್ಪಿಸಲು ಆದ್ಯತೆ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ

* ವಿವಿಧೆಡೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದು, ಆ ನಿಟ್ಟಿನಲ್ಲಿ ಲಭ್ಯವಿರುವ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಸಹ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಮೂಲ ಸೌಕರ್ಯ ಒದಗಿಸಲು ಹಾಗೂ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ ನೀಡಿದರು.
ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮದಲ್ಲಿ 58.50 ಲಕ್ಷ ರೂ. ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ (ಫೆ.6) ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ತೆಂಕನಿಡಿಯೂರು ಗ್ರಾಮದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಬೈಲಕೆರೆ ನಾಗಬನ ಬಳಿ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ., ಕೆಳಾರ್ಕಳಬೆಟ್ಟು ಭೋಜರಾಜ ಕಾಂಪೌಂಡ್​ ಕೊಜಕುಳಿ ಒಳರಸ್ತೆ ಅಭಿವೃದ್ಧಿ ಕಾಮಗಾರಿಗೆ 15 ಲಕ್ಷ ರೂ. ಅಂಬಿಕಾ ವೈಟ್​ ರಸ್ತೆ ಹಾಗೂ ಲಕ್ಷಿ$್ಮ ನಗರ 9ನೇ ಕ್ರಾಸ್​ನ ರಸ್ತೆ ಅಭಿವೃದ್ಧಿಗೆ 15 ಲಕ್ಷ ರೂ. ಅನುದಾನ ಮಂಜೂರಿಯಾಗಿದೆ. ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ಮುಗಿಯಲಿದೆ. ಪ್ರಗತಿ ಲೇಔಟ್​ನಲ್ಲಿ 8.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್​ ರಸ್ತೆಯನ್ನು ಈಗಾಗಲೇ ಉದ್ಘಾಟಿಸಲಾಗಿದೆ ಎಂದರು.
ಸ್ಥಳೀಯ ಮುಖಂಡರಾದ ಶರತ್​ ಬೈಲಕೆರೆ, ವಿಜಯ ಪ್ರಕಾಶ್​, ವಿನೋದ್​ ಸುವರ್ಣ, ಚರಣರಾಜ್​, ಅರುಣ್​ ಜತ್ತನ್​, ಸತೀಶ್​ ಬೈಲಕೆರೆ, ಕೃಷ್ಣ ಶೆಟ್ಟಿ, ಗಾಯತ್ರಿ, ಮಾಲಿನಿ ಜತ್ತನ್​, ಶಾಲಿನಿ, ಪುಷ್ಪಾ, ಪ್ರಶಾಂತ್​ ಹೆಬ್ಬಾರ್​, ರೇಖಾ, ಗೀತಾ ಶೆಟ್ಟಿ ಇತರರಿದ್ದರು.