ಚೇರ್ಕಾಡಿಯ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು. ಯಶ್ಪಾಲ್ ಸುವರ್ಣ, ಆರೂರು ತಿಮ್ಮಪ್ಪ ಶೆಟ್ಟಿ, ಹರೀಶ್ ಶೆಟ್ಟಿ ಚೇರ್ಕಾಡಿ, ರಾಜೀವ್ ಕುಲಾಲ್, ರಾಧಾಕೃಷ್ಣ ಸಾಮಂತ್, ರೇಖಾ ಭಟ್, ಮಂಜುನಾಥ್ ನಾಯ್ಕ್, ಕನ್ನಾರು ಕಮಲಾಕ್ಷ ಹೆಬ್ಬಾರ್ ಇತರರಿದ್ದರು.
* ಉಡುಪಿ ಶಾಸಕ ಯಶಪಾಲ್ ಸುವರ್ಣ ಅನಿಸಿಕೆ
* ಚೇರ್ಕಾಡಿ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ
ಉಡುಪಿ: ಶೈಕ್ಷಣಿಕ ಕ್ಷೇತ್ರ ವಿಸ್ತಾರಗೊಂಡಿದ್ದು ಎಲ್ಲರಿಗೂ ಸುಶಿಕ್ಷಿತರಾಗಲು ಇಂದು ಅವಕಾಶವಿದೆ. ಶಿಕ್ಷಣದಿಂದ ಜ್ಞಾನ ಗಳಿಕೆಯ ಮೂಲಕ ಬದುಕು ಸಾರ್ಥಕ ಮಾಡಿಕೊಳ್ಳಬೇಕು. ಬಾಲ್ಯದಿಂದಲೇ ಉತ್ತಮವಾಗಿ ಕಲಿತರೆ ವಿದ್ಯಾರ್ಥಿಗಳು ಮುಂದೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಇದಕ್ಕೆ ಶಿಕ್ಷಕರು ಮತ್ತು ಪಾಲಕರ ಮಾರ್ಗದರ್ಶನ, ಪ್ರೋತ್ಸಾಹದ ಅಗತ್ಯತೆಯಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಬ್ರಹ್ಮಾವರ್ ಚೇರ್ಕಾಡಿಯ ಶಾರದಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕೊಡಮಾಡಿದ ಉಚಿತ ಪಠ್ಯಪುಸ್ತಕ ವಿತರಿಸಿ ಮಾತನಾಡಿದರು.
ಎಲ್ಲ ವಿದ್ಯಾರ್ಥಿಗಳಿಗೆ ಯಶ್ಪಾಲ್ ಸುವರ್ಣ ಅವರ ಪುಷ್ಪಾನಂದ ಫೌಂಡೇಷನ್ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಹಿರಿಯ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ, ಹರೀಶ್ ಶೆಟ್ಟಿ ಚೇರ್ಕಾಡಿ, ರಾಜೀವ್ ಕುಲಾಲ್, ಪ್ರಮುಖರಾದ ರಾಧಾಕೃಷ್ಣ ಸಾಮಂತ್, ರೇಖಾ ಭಟ್, ಸುರೇಶ್ ಪೂಜಾರಿ, ಪ್ರಸಾದ್ ಭಟ್, ನವೀನ್ ಶೆಟ್ಟಿ, ಪ್ರಸಾದ್ ಕುಲಾಲ್, ವಿನಯ್ ನಾಯ್ಕ್, ರವಿರಾಜ್ ಭಟ್, ರವೀಂದ್ರ ಕುಲಾಲ್ ಮತ್ತು ಶಿಕ್ಷಕರು ಉಪಸಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ್ ನಾಯ್ಕ್ ಸ್ವಾಗತಿಸಿದರು. ಕನ್ನಾರು ಕಮಲಾಕ್ಷ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ನಾಯ್ಕ್ ವಂದಿಸಿದರು.