ಉಡುಪಿ ಕಲ್ಸಂಕ ವೃತ್ತದಲ್ಲಿ ಸೇತುವೆ ಅಗಲೀಕರಣ ಕಾಮಗಾರಿಗೆ ಯಶ್​ಪಾಲ್​ ಸುವರ್ಣ ಚಾಲನೆ ನೀಡಿದರು. ಪ್ರಭಾಕರ್​ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಟಿ.ಜಿ. ಹೆಗ್ಡೆ, ಗಿರೀಶ್​ ಅಂಚನ್​, ಸುಂದರ್​ ಕಲ್ಮಾಡಿ, ಜಯಂತಿ ಪೂಜಾರಿ, ಅಶೋಕ್​ ನಾಯ್ಕ್​, ಗಿರಿಧರ್​ ಆಚಾರ್ಯ, ಲಕ್ಷ್ಮೀ ಮಂಜುನಾಥ್​, ಸವಿತಾ ಹರೀಶ್​ ರಾಮ್​, ಭಾರತಿ ಪ್ರಶಾಂತ್​, ಮಾನಸಾ ಸಿ. ಪೈ, ಅನಿತಾ ಡಿಸೋಜಾ ಇತರರಿದ್ದರು. 
ಉಡುಪಿ

ವಾಹನ ದಟ್ಟಣೆ ಸಮಸ್ಯೆಗೆ ಶೀಘ್ರ ಪರಿಹಾರ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ 

* ಕಲ್ಸಂಕದಲ್ಲಿ ಸೇತುವೆ ಅಗಲೀಕರಣಕ್ಕೆ ಗುದ್ದಲಿಪೂಜೆ

ಉಡುಪಿ: ಉಡುಪಿ ನಗರದ ಕಲ್ಸಂಕ ವೃತ್ತದಲ್ಲಿ ವಾಹನ ದಟ್ಟಣೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬಹು ವರ್ಷಗಳ ಬೇಡಿಕೆಯಾಗಿದ್ದ ಅಂಬಾಗಿಲು ತಿರುವು ರಸ್ತೆ ಕಾಮಗಾರಿಗೆ ನಗರಸಭೆಯಿಂದ 49 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸುಗಮ ವಾಹನ ಸಂಚಾರ ಸಾಧ್ಯವಾಗಲಿದೆ ಎಂದು ಎಂದು ಭರವಸೆ ನೀಡಿದರು.
ಉಡುಪಿ ನಗರಸಭೆಯ ವತಿಯಿಂದ ಕಲ್ಸಂಕ ವೃತ್ತದ ಬಳಿ ನಿರ್ಮಾಣಗೊಳ್ಳಲಿರುವ ಅಂಬಾಗಿಲು ತಿರುವು ಸೇತುವೆ ಅಗಲೀಕರಣ (ಫ್ರೀ ಲೆಫ್ಟ್​ ) ಕಾಮಗಾರಿಗೆ ಸೋಮವಾರ (ಫೆ.2) ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಟಿ.ಜಿ. ಹೆಗ್ಡೆ, ಗಿರೀಶ್​ ಅಂಚನ್​, ಸುಂದರ್​ ಕಲ್ಮಾಡಿ, ಜಯಂತಿ ಪೂಜಾರಿ, ಅಶೋಕ್​ ನಾಯ್ಕ್​, ಗಿರಿಧರ್​ ಆಚಾರ್ಯ, ಲಕ್ಷ್ಮೀ ಮಂಜುನಾಥ್​, ಸವಿತಾ ಹರೀಶ್​ ರಾಮ್​, ಭಾರತಿ ಪ್ರಶಾಂತ್​, ಮಾನಸಾ ಸಿ. ಪೈ, ಅನಿತಾ ಡಿಸೋಜಾ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್​ ಅಮೀನ್​, ಪ್ರಧಾನ ಕಾರ್ಯದರ್ಶಿ ಜಗದೀಶ್​ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಪ್ರಮುಖರಾದ ಕಿಶೋರ್​ ಕರಂಬಳ್ಳಿ, ದಯಾಶಿನಿ ಇತರರು ಉಪಸ್ಥಿತರಿದ್ದರು.