ಶೇ. 100 ಫಲಿತಾಂಶ ದಾಖಲಿಸಿದ ಶಾಲಾ ಕಾಲೇಜುಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. 
ಉಡುಪಿ

ಮೌಲ್ಯಯುತ ಸಮಾಜ ನಿಮಾರ್ಣಕ್ಕೆ ಶಿಕ್ಷಕರ ಕೊಡುಗೆ ಅನನ್ಯ: ವೀರೇಶಾನಂದ ಶ್ರೀ

ಉಡುಪಿ: ಉತ್ತಮ ಸಂಸ್ಕಾರ ಹಾಗೂ ಮೌಲ್ಯಾಧಾರಿತ ಆದರ್ಶವ್ಯಕ್ತಿತ್ವ ರೂಪಿಸುವ ಏಕೈಕ ವೃತ್ತಿ ಶಿಕ್ಷಕ ವೃತ್ತಿಯಾಗಿದ್ದು, ಮೌಲ್ಯಾಧಾರಿತ ಸಮಾಜ ನಿಮಾರ್ಣದಲ್ಲಿ ಶಿಕ್ಷಕರ ಕೊಡುಗೆ ಅನನ್ಯ. ಇಂದಿನ ಸಮಾಜದಲ್ಲಿ ಶೈಕ್ಷಣಿಕವಾಗಿ ಉತ್ತಮ ಫಲಿತಾಂಶದ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಶ್ರೀ ರಾಮಕೃಷ್ಣ ಆಶ್ರಮದ ತುಮಕೂರಿನ ಶ್ರೀ ಎಸ್​. ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಬೀಡಿನಗುಡ್ಡೆಯ ಯಕ್ಷಗಾನ ಕಲಾರಂಗ ಆಡಿಟೋರಿಯಂನಲ್ಲಿ ಪುಷ್ಪಾನಂದ ಫೌಂಡೇಶನ್​ ವತಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್​.ಎಸ್​. ಎಲ್​. ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ 41 ಶಾಲಾ ಕಾಲೇಜುಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್​ ಹಾಗೂ ನಿಕಟಪೂರ್ವ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರತಾಪ್​ ಹೆಗ್ಡೆ ಮಾರಾಳಿ ಮುಖ್ಯ ಅತಿಥಿಯಾಗಿದ್ದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್​, ಮಾರುತಿ, ಡಯಟ್​ ಪ್ರಾಂಶುಪಾಲ ಅಶೋಕ್​ ಕಾಮತ್​, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯಲ್ಲಮ್ಮ, ಉಮಾ ಅವರನ್ನು ಅಭಿನಂದಿಸಲಾಯಿತು. ಎಸ್​.ಎಸ್​.ಎಲ್​.ಸಿ. ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಕಲ್ಯಾಣಿ, ಅಶ್ವಿತ ಹಾಗೂ ನಿಶ್ಚಲ್​ ಪೂಜಾರಿ ಹಾಗೂ ಶೇ. 100 ಫಲಿತಾಂಶ ದಾಖಲಿಸಿದ ಶಾಲಾ ಕಾಲೇಜುಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಾಸಕರ ಆಪ್ತ ಕಾರ್ಯದರ್ಶಿ ಮಟ್ಟು ಯತೀಶ್​ ಕೋಟ್ಯಾನ್​ ಸ್ವಾಗತಿಸಿ, ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.
"

ಉಡುಪಿ ಜಿಲ್ಲೆ ಶೈಕ್ಷಣಿಕ ಸಾಧನೆಯ ಮೂಲಕ ರಾಷ್ಟ್ರಕ್ಕೆ ಮಾದರಿಯಾಗಿದೆ. ಶಿಕ್ಷಣ ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನಗದು ಪುರಸ್ಕಾರದೊಂದಿಗೆ 41 ಶಾಲೆಗಳನ್ನು ಫೌಂಡೇಶನ್​ ವತಿಯಿಂದ ಗೌರವಿಸುತ್ತಿರುವುದು ಸಂತಸ ತಂದಿದೆ. ನರೇಂದ್ರ ಮೋದಿಯವರ ವಿಕಸಿತ ಭಾರತ ನಿಮಾರ್ಣದ ಸಂಕಲ್ಪ ಸಾಕಾರಕ್ಕೆ ಉಡುಪಿಯ ಶೈಕ್ಷಣಿಕ ಸಾಧನೆ ಶಕ್ತಿ ತುಂಬಿದೆ.

— ಯಶ್​ ಪಾಲ್​ ಸುವರ್ಣ, ಪ್ರವರ್ತಕರು, ಪುಷ್ಪಾನಂದ ಫೌಂಡೇಶನ್​