ಚೋಮು ನಲಿಕೆ ಅವರ ಮನೆಯನ್ನು ಸಂಪೂರ್ಣ ದುರಸ್ತಿಗೊಳಿಸಿ ಹಸ್ತಾಂತರಿಸಲಾಯಿತು. ಶಾಸಕ ಹರೀಶ್ ಪೂಂಜ, ಸಮಾಜ ಸೇವಕ ಬಾಲಕೃಷ್ಣ ಮಾಣಿಂಜೆ ಮೊದಲಾದವರಿದ್ದರು. 
ಉಡುಪಿ

ಮನೆ ದುರಸ್ತಿ ಮಾಡಿಕೊಟ್ಟ ಶಾಸಕ ಪೂಂಜc

ಬೆಳ್ತಂಗಡಿ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಹಿಂಬದಿ ಗೋಡೆ ಸಂಪೂರ್ಣ ಕುಸಿದು ಬಿದ್ದು ಅಸಹಾಯಕರಾಗಿದ್ದ ಕಲ್ಮಂಜ ಗ್ರಾಮದ ದಲಿತ ಸಮುದಾಯದ ವೃದ್ಧೆ ಚೋಮು ನಲಿಕೆ ಅವರಿಗೆ ಶಾಸಕ ಹರೀಶ್ ಪೂಂಜ ತಾವು ಕೊಟ್ಟ ಮಾತಿನಂತೆ ಮನೆಯನ್ನು ಸಂಪೂರ್ಣ ದುರಸ್ತಿ ಮಾಡಿಕೊಟ್ಟು ವಾಸ ಯೋಗ್ಯವಾಗಿಸಿದ್ದಾರೆ.

ಶಾಸಕರು ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಚೋಮು ಅವರ ಮನೆ ಪರಿಸ್ಥಿತಿ ಗಮನಿಸಿ ಮನೆ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದರು. ತಕ್ಷಣವೇ ಸ್ಥಳೀಯ ಯುವಕರನ್ನು ಕರೆಸಿ ಮನೆಯನ್ನು ದುರಸ್ತಿ ಮಾಡುವಂತೆ ತಿಳಿಸಿದ್ದರು. ಅಲ್ಲದೆ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದರು. ಶಾಸಕರ ಮಾನವೀಯ ಕಾರ್ಯಕ್ಕೆ ಕಲ್ಮಂಜ ಬಿಜೆಪಿ ಗ್ರಾಮ ಸಮಿತಿಯ ಯುವಕರು ಕೈಜೋಡಿಸಿ ಆ.9ರಂದು ಶ್ರಮದಾನದ ಮೂಲಕ ಸುಸಜ್ಜಿತವಾದ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಜೀವ ಇರುವ ತನಕ ಮರೆಯುವುದಿಲ್ಲ

ಶಾಸಕರ ಮಾನವೀಯ ಸೇವೆಗೆ ಕಂಬನಿ ಮಿಡಿದ ಚೋಮು ಅಜ್ಜಿ, ಭಿಕ್ಷೆ ಬೇಡಿದರೂ ಏನೂ ಕೊಡದ ಈ ಕಾಲದಲ್ಲಿ ಇಂತಹ ಮನೆ ನಿರ್ಮಾಣ ಮಾಡಿಕೊಟ್ಟ ಶಾಸಕರನ್ನು ನಾನು ಸಾಯುವವರೆಗೂ ಮರೆಯುವುದಿಲ್ಲ ಎಂದರು.