ಶಾಸಕ ಯಶ್​ ಪಾಲ್​ ಎ. ಸುವರ್ಣ ರಂಗಭೂಮಿ ಆನಂದೋತ್ಸವ -ಉದ್ಘಾಟಿಸಿದರು.  
ಉಡುಪಿ

ರಂಗಭೂಮಿ ಸ್ಥಳಿಯ ಪ್ರತಿಭೆಗಳಿಗೆ ವೇದಿಕೆ: ಶಾಸಕ ಯಶ್​ ಪಾಲ್​

ಉಡುಪಿ: ಸ್ಥಳಿಯ ಪ್ರತಿಭೆಗಳಿಗೆ ರಂಗಭೂಮಿ ವೇದಿಕೆಯಾಗಿದೆ. ಈ ಮೂಲಕ ನಾಡಿಗೆ ಉತ್ತಮ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಯುವಪೀಳಿಗೆಗೆ ಸಂಸ್ಕಾರ ನೀಡುವ ಕಾರ್ಯ ರಂಗಭೂಮಿ ಮಾಡುತ್ತಿದೆ ಎಂದು ಶಾಸಕ ಯಶ್​ ಪಾಲ್​ ಎ. ಸುವರ್ಣ ಹೇಳಿದರು.
ಎಂಜಿಎಂ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ವತಿಯಿಂದ ನಡೆದ ದಿ. ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ರಂಗಭೂಮಿ ಆನಂದೋತ್ಸವ -ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಅಧ್ಯಕ್ಷ ಡಾ. ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾಪ್ರೇಮಿಗಳು ನಾಟಕಗಳಿಗೆ ಪ್ರೋತ್ಸಾಹ ನೀಡಬೇಕು. ಕಲಾವಿದರನ್ನು ಗೌರವಿಸಬೇಕು. ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸಬೇಕು ಎಂದರು.
ನಟ ಶ್ರೀಪಾದ ಹೆಗಡೆ ಹಾಗೂ ಕಲಾವಿದ ಡಾ. ರಾಘವ ನಂಬ್ಯಾರ್​ ಅವರನ್ನು ಸನ್ಮಾನಿಸಲಾಯಿತು. ಕರ್ಣಾಟಕ ಬ್ಯಾಂಕ್​ ಉಡುಪಿ ಪ್ರದೇಶಿಕ ಕಚೇರಿಯ ಅಧಿಕಾರಿ ಸುಬ್ರಹ್ಮಣ್ಯ ಶುಭಹಾರೈಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಎನ್​. ಆರ್​. ಬಲ್ಲಾಳ್​, ಭಾಸ್ಕರ್​ ರಾವ್​, ಪ್ರಧಾನ ಕಾರ್ಯದರ್ಶಿ ಪ್ರದಿಪ್​ ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು. ಪ್ರಭಾಕರ ಜಿ.ಪಿ. ತುಮರಿ ನಿರೂಪಿಸಿದರು. ವಿದ್ಯಾವಂತ ಆಚಾರ್​ ಸ್ವಾಗತಿಸಿದರು. ಕಾರ್ತಿಕ್​ ವಂದಿಸಿದರು. ರಂಗಭೂಮಿ ಕಲಾವಿದರಿಂದ 'ಸಂವೇದನೆ' ನಾಟಕ ಪ್ರದರ್ಶನಗೊಂಡಿತು.