ಉಡುಪಿಯ ತೆಂಕನಿಡಿಯೂರು ಕಾಲೇಜ್ನಲ್ಲಿ ಆಯೋಜಿಸಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಡಾ. ಪಿ.ವಿ. ಭಂಡಾರಿ ಉದ್ಘಾಟಿಸಿದರು. ಪ್ರೊ. ನಿತ್ಯಾನಂದ ವಿ. ಗಾಂವ್ಕರ್, ನಾಗರಾಜ್ ಮೂರ್ತಿ, ಡಾ.ವಿಷ್ಣುಮೂರ್ತಿ ಪ್ರಭು, ಸುಷ್ಮಾ ಟಿ., ಉಷಾ, ರಾಜೇಂದ್ರ ಎಂ., ರವಿ ಎಸ್., ಡಾ. ಗಣೇಶಪ್ರಸಾದ್ ಜಿ. ನಾಯಕ್, ಪ್ರಭಾಕರ್ ಆಚಾರ್ಯ ಇದ್ದರು.
* ಮನೋವೈದ್ಯ ಡಾ. ಪಿ.ವಿ. ಭಂಡಾರಿ ಅನಿಸಿಕೆ
* ತೆಂಕನಿಡಿಯೂರು ಕಾಲೇಜ್ನಲ್ಲಿ ಮಾಹಿತಿ ಕಾರ್ಯಕ್ರಮ
ಉಡುಪಿ: ಶಾಲಾ-ಕಾಲೇಜುಗಳಲ್ಲಿಯೂ ಸಹ ಮಾನಸಿಕ ಆರೋಗ್ಯದಂತಹ ಕಾರ್ಯಕ್ರಮ ಆಯೋಜಿಸುವ ಅಗತ್ಯತೆ ಇಂದು ಹೆಚ್ಚಿದೆ. ದೈಹಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯವೂ ಸಹ ಪ್ರಾಮುಖ್ಯತೆ ಪಡೆದಿದೆ. ಆತಂಕ ಮತ್ತು ಶೈಕ್ಷಣಿಕ ಒತ್ತಡ ನಿಭಾಯಿಸಲು ವ್ಯಾಯಾಮ, ಕ್ರೀಡೆ ಮತ್ತು ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಡಾ. ಎ.ವಿ.ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸಲಹೆ ನೀಡಿದರು.
ಉಡುಪಿಯ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಸಹಯೋಗದಲ್ಲಿ ಆಯೋಜಿಸಿದ್ದ 'ಯುವಜನತೆಯಲ್ಲಿ ಮಾನಸಿಕ ಆರೋಗ್ಯ' ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧ ವರ್ತನಾ ವ್ಯಸನಗಳ ಕುರಿತಾಗಿ ನಾಗರಾಜ್ ಮೂರ್ತಿ ಮಾತನಾಡಿ, ಮಾದಕ ದ್ರವ್ಯವಷ್ಟೇ ಅಲ್ಲದೆ ಕೆಲವು ವರ್ತನೆಗಳೂ ಸಹ ವ್ಯಸನಗಳಾಗುತ್ತವೆ. ಮೊಬೈಲ್ ಫೋನ್, ಸಾಮಾಜಿಕ ಜಾಲತಾಣ, ಆನ್ಲೈನ್ ಗೇಮಿಂಗ್, ಜೂಜಾಟ, ಶಾಪಿಂಗ್, ಅಶ್ಲೀಲ ವಿಡಿಯೋ ವೀಕ್ಷಣೆ, ಇಂಟರ್ನೆಟ್ ಬಳಕೆ ಇವುಗಳು ಮಿತಿ ಮೀರಿದಾಗ ವ್ಯಸನವಾಗುತ್ತದೆ. ಅವುಗಳಿಂದ ಓದು, ಕೆಲಸ, ಕುಟುಂಬ ಜೀವನದ ಮೇಲೂ ದುಷ್ಪರಿಣಾಮ ಉಂಟಾಗಬಹುದು ಎಂದರು.
ಕಾಲೇಜ್ನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ.ವಿಷ್ಣುಮೂರ್ತಿ ಪ್ರಭು, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಟಿ., ವಿದ್ಯಾರ್ಥಿಗಳ ಕ್ಷೇತ್ರಕಾರ್ಯ ಮಾರ್ಗದರ್ಶಕರಾದ ಉಷಾ, ರಾಜೇಂದ್ರ ಎಂ., ರವಿ ಎಸ್., ಸಮಾಜಕಾರ್ಯ ಉಪನ್ಯಾಸಕರಾದ ಡಾ. ಗಣೇಶಪ್ರಸಾದ್ ಜಿ. ನಾಯಕ್, ಪ್ರಭಾಕರ್ ಆಚಾರ್ಯ ಉಪಸ್ಥಿತರಿದ್ದರು.
ಆಯೋಜಕರಾದ ಗೌತಮಿ ಜಿ.ಎಸ್., ಶಾಂತಿಪ್ರಿಯಾ ಡಿಕೋಸ್ತ, ಅಂಕಿತಾ, ಪ್ರಿಯಾ ಆರ್.ಎಲ್., ಧೃತಿ ಕೆ.ವಿ. ಪಾಲ್ಗೊಂಡಿದ್ದರು. ಮೊಹಮ್ಮದ್ ಸಹಾದ್ ಸ್ವಾಗತಿಸಿ, ಅಕ್ಷಯ್ ಬಿ.ಆರ್. ವಂದಿಸಿದರು. ದ್ವಿತೀಯ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿ ಶ್ರೀನಿಧಿ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.