ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆ, ಕರ್ನಾಟಕ ಪೊಲೀಸ್ ಇಲಾಖೆ, ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಬೆನಕ ಆರೋಗ್ಯ ಕೇಂದ್ರ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳು, ಕಾಶಿ ಪ್ಯಾಲೇಸ್, ದಿ ಓಷನ್ ಪರ್ಲ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು ಶಾಖೆ, ಸಂಧ್ಯಾ ಫ್ರೆಶ್, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಮೊದಲಾದ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜು.12ರಂದು ಬೆಳಗ್ಗೆ 7 ಗಂಟೆಗೆ ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ‘ಮೆಗಾ ರೈನಾಥಾನ್-2026’ ಆಯೋಜಿಸಲಾಗಿದೆ.
‘ಮಾನ್ಸೂನ್ ಮೈಲ್ಸ್, ಡ್ರಗ್ ಫ್ರೀ ಸ್ಮೈಲ್ಸ್’ ವಾಕ್ಯದಡಿ ನಡೆಯುವ ರೈನಾಥಾನ್‌ನಲ್ಲಿ 4 ಕಿ.ಮೀ. ಮತ್ತು 8 ಕಿ.ಮೀ. ಓಟದ ವಿಭಾಗಗಳಿದ್ದು ಉಜಿರೆ ಎಸ್‌ಡಿಎಂ ಕಾಲೇಜಿನಿಂದ ಆರಂಭವಾಗಿ ಅಲ್ಲಿಯೇ ಸಮಾಪನಗೊಳ್ಳಲಿದೆ. ಈಗಾಗಲೇ 2,000ಕ್ಕೂ ಅಧಿಕ ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. 3181ರ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ಮಾಜಿ ಎಂಎಲ್‌ಸಿ ಕೆ.ಪ್ರತಾಪಸಿಂಹ ನಾಯಕ್, ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಉದ್ಯಮಿ ಶಶಿಧರ ಶೆಟ್ಟಿ, ಡಿವೈಎಸ್‌ಪಿ ರೋಹಿಣಿ ಸಿ.ಕೆ., ವೃತ್ತ ನಿರೀಕ್ಷಕ ರವಿ ಬಿ.ಎಸ್., ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಮೋಹನ್ ಆಳ್ವ, ಮೂಡುಬಿದಿರೆ ಎಕ್ಸಲೆಂಟ್ ಅಧಕ್ಷ ಯುವರಾಜ್ ಜೈನ್, ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ ಜೈನ್, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಸ್ಥಾಪಕ ಮೋಹನ್ ಕುಮಾರ್, ಬೆಸ್ಟ್ ಫೌಂಡೇಷನ್‌ನ ರಕ್ಷಿತ್ ಶಿವರಾಂ ಮೊದಲಾದವರು ಉಪಸ್ಥಿತರಿರುವರು.
ವಿವಿಧ ವಿಭಾಗಗಳು
ಒಟ್ಟು 1.63 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದ್ದು, ವಿವಿಧ ವಯೋಮಿತಿ ಹಾಗೂ ಓಟದ ವಿಭಾಗಗಳಲ್ಲಿ ಒಟ್ಟು 63 ಬಹುಮಾನ ವಿತರಿಸಲಾಗುತ್ತದೆ. 8 ಕಿ.ಮೀ. ಓಟದಲ್ಲಿ ಪ್ರಥಮ ಬಹುಮಾನ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ., ತೃತೀಯ 2 ಸಾವಿರ ರೂ. ಹಾಗೂ 4 ಕಿ.ಮೀ. ಓಟದಲ್ಲಿ ಪ್ರಥಮ 3 ಸಾವಿರ ರೂ., ದ್ವಿತೀಯ 2 ಸಾವಿರ ರೂ., ತೃತೀಯ 1 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ(ಸಂದೇಶ್ ರಾವ್: 96321 33669, ಪ್ರವೀಣ್ ಘೋರೆ: 98457 33143) ಸಂಪರ್ಕಿಸಬಹುದಾಗಿದೆ ಎಂದು ಆಯೋಜನಾ ಸಮಿತಿಯ ಸದಸ್ಯ ಸಂದೇಶ್ ರಾವ್ ಹಾಗೂ ಪ್ರವೀಣ್ ಘೋರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.