ಮಲಾರ್ ಕೋಡಿ ರಸ್ತೆಗೆ ಮುಹಿಯುದ್ದೀನ್ ಜುಮಾ ಮಸೀದಿ ಕೋಶಾಧಿಕಾರಿ ಇಸ್ಮಾಯಿಲ್ ಕೋಡಿ ಶಂಕುಸ್ಥಾಪನೆಗೈದರು. ಸ್ಪೀಕರ್ ಯು.ಟಿ.ಖಾದರ್, ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಹರೇಕಳ ಮತ್ತಿತರರಿದ್ದರು. 
ಉಡುಪಿ

ಗ್ರಾಮೀಣ ಜನರ ವಲಸೆ ತಪ್ಪಿಸಲು ಕ್ರಮ

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಉಳ್ಳಾಲ ತಾಲೂಕಿನಾದ್ಯಂತ ಬಹುತೇಕ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆದಿದೆ. ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರು, ನಿರಂತರ ವಿದ್ಯುತ್ ವ್ಯವಸ್ಥೆ ಕಾಮಗಾರಿ ಪ್ರಗತಿಯಲ್ಲಿದೆ. ಅಭಿವೃದ್ಧಿಯಿಂದ ಗ್ರಾಮೀಣ ಭಾಗದ ಜನರು ವಲಸೆ ಹೋಗುವುದನ್ನು ತಪ್ಪಿಸಲು ಸಾಧ್ಯ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಹರೇಕಳ ಗ್ರಾಮದ ಮಲಾರ್ ಕೋಡಿ ರಸ್ತೆಗೆ ಮುಹಿಯುದ್ದೀನ್ ಜುಮಾ ಮಸೀದಿ ಕೋಶಾಧಿಕಾರಿ ಇಸ್ಮಾಯಿಲ್ ಕೋಡಿ ಶಂಕುಸ್ಥಾಪನೆಗೈದರು.
ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಹರೇಕಳ ಮಾತನಾಡಿ, ಅಡ್ಯಾರ್ ಸಂಪರ್ಕ ಸೇತುವೆ ನಿರ್ಮಾಣದ ಮೂಲಕ ಹರೇಕಳ ಗ್ರಾಮದ ಅಭಿವೃದ್ಧಿಗೆ ವೇಗ ಪಡೆದಿದೆ. ಸ್ಪೀಕರ್ ಖಾದರ್ ಅತ್ಯಧಿಕ ಅನುದಾನ ಗ್ರಾಮಕ್ಕೆ ನೀಡಿದ್ದಾರೆ. ಸ್ಥಳೀಯರ ಬೇಡಿಕೆ ಮೇರೆಗೆ ತೀರಾ ಹದಗೆಟ್ಟಿದ್ದ ಕೋಡಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.
ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಸ್.ಎಂ.ಆಸಿಫ್ ಇಕ್ಬಾಲ್, ಹರೇಕಳ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್‌ನಗರ, ಸದಸ್ಯರಾದ ಸತ್ತಾರ್ ನ್ಯೂಪಡ್ಪು, ಎಸ್.ಎಂ.ಬಶೀರ್, ಅಬೂಬಕ್ಕರ್ ಸಿದ್ದೀಕ್, ಮಾಜಿ ಸದಸ್ಯ ಬಶೀರ್ ಉಂಬುದ, ಪ್ರಮುಖರಾದ ಝಕರಿಯಾ ಮಲಾರ್, ಝಾಯಿದ್ ಮಲಾರ್, ಸಾಹಿಲ್ ಮಹಮ್ಮದ್ ಕೋಡಿ, ಇಬ್ರಾಹಿಂ ಮೋನು, ರಿಝ್ವನ್ ಕೋಡಿ, ಅನ್ವರ್ ಗುಂಡ್ಯ, ಸಾಹುಲ್ ಗುಂಡ್ಯ, ಅಬ್ಬು ಕೋಡಿ, ಅಬೂಬಕ್ಕರ್ ಕೋಡಿ, ರಿಕ್ಷಾ ಇಸ್ಮಾಯಿಲ್, ಅನ್ವರ್ ಕೋಡಿ, ಶಾಫಿ ಬೇಕರಿ, ಯಾಸೀರ್ ಬೇಕರಿ, ಜಲಾಲ್, ಸಂಶುದ್ದೀನ್ ಮೊದಲಾದವರಿದ್ದರು.