ಕಾಸರಗೋಡು: ಕಾರಿನಲ್ಲಿ ಬೆಂಗಳೂರಿಗೆ ಮಾದಕವಸ್ತು ಎಂಡಿಎಂಎ ಸಾಗಿಸಿದ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಉಪ್ಪಳ ಮಣ್ಣಂಗುಳಿ ನಿಜಾಮ್ ಮಂಜಿಲ್‌ನ ಸಯ್ಯದ್ ಮುಹಮ್ಮದ್ ನವಾಜ್ (33) ಎಂಬಾತನನ್ನು ಪೆರಿಂದಲ್‌ಮಣ್ಣ ಠಾಣೆ ಇನ್‌ಸ್ಪೆಕ್ಟರ್ ಸುಮೇಶ್ ಸುಧಾಕರನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಿದ್ದು, ಅವರು ನೀಡಿದ ಮಾಹಿತಿಯನ್ವಯ ಮಹಮ್ಮದ್‌ನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಮಾದಕದ್ರವ್ಯ ಪ್ರಕರಣ ಹಾಗೂ ಹಲ್ಲೆ ಪ್ರಕರಣಗಳಿದ್ದು, ಈ ಹಿಂದೆ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.