arrest 
ಉಡುಪಿ

ಎಂಡಿಎಂಎ ವಶ, ಮತ್ತೊಬ್ಬ ಆರೋಪಿ ಬಂಧನ

ಇಂದಿರಾ ಎನ್ ಕೆ
ಕಾಸರಗೋಡು: ಆಪರೇಷನ್ ತೂಫಾನ್ ಅಂಗವಾಗಿ ಮಂಜೇಶ್ವರ ಪೊಲೀಸರು ಜೋಡುಕಲ್ಲಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 112 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಕಯ್ಯರು ನಿವಾಸಿ ಅಬ್ದುಲ್ ಸಮದ್ (31) ಆರೋಪಿ. ಇನ್‌ಸ್ಪೆಕ್ಟರ್ ಪಿ.ಕೆ.ಬಿಜೇಶ್ ನೇತೃತ್ವದ ಪೊಲೀಸರ ತಂಡ ಸೋಂಕಾಲಿನಲ್ಲಿ ಈತನನ್ನು ಬಂಧಿಸಲಾಗಿದೆ. ಕಳೆದ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ 112 ಗ್ರಾಂ ಎಂಡಿಎಂಎ ವಶಪಡಿಸಲಾಗಿತ್ತು.

ಪೊಲೀಸರನ್ನು ಕಂಡು ಮಾದಕವಸ್ತುವನ್ನು ಆರೋಪಿಗಳು ಎಸೆದು ಪರಾರಿಯಾಗಲು ಯತ್ನಿಸಿದ ಸಂದರ್ಭ ಜೋಡುಕಲ್ಲು ನಿವಾಸಿ ಫಾರೂಕ್ ಮುಹಮ್ಮದ್ ಹಾಗೂ ಮಂಗಲ್ಪಾಡಿ ಪಚ್ಚಂಬಳ ದಿನಾ ನಗರ ನಿವಾಸಿ ಮೊಯ್ದೀನ್‌ಕುಂಞ ಎಂಬುವರನ್ನು ಬಂಧಿಸಿದ್ದರು. ಇವರನ್ನು ತನಿಖೆಗೆ ಒಳಪಡಿಸಿದಾಗ ಅಬ್ದುಲ್ ಸಮದ್ ಬಗ್ಗೆ ಮಾಹಿತಿ ಲಭಿಸಿತ್ತು.