Arrest 
ಉಡುಪಿ

ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶ

ಇಂದಿರಾ ಎನ್ ಕೆ
ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮಂಗಲ್ಪಾಡಿ ಪಚ್ಚಂಬಳ ದಿನಾರ್‌ನಗರದ ಮೊಯ್ದೀನ್ ಕುಂಞ (41), ಜೋಡುಕಲ್ಲಿನ ಫಾರೂಕ್ ಮೊಹಮ್ಮದ್ (44)ಬಂಧಿತರು.
112.170 ಗ್ರಾಂ ಎಂಡಿಎಂಎ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ. ಮಂಜೇಶ್ವರ ಠಾಣೆ ಎಸ್‌ಐ ಕೆ.ಆರ್.ಉಮೇಶ್ ನೇತೃತ್ವದ ಪೊಲೀಸರ ತಂಡ ಜೋಡುಕಲ್ಲಿನಲ್ಲಿ ಕಾರ್ಯಾಚರಣೆ ನಡೆಸಿತು.