ಉಡುಪಿ ಮಲ್ಪೆಯಲ್ಲಿ ಎಂ.ದೇವದಾಸ್ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮ ನಡೆಯಿತು. ಜಯನ್ ಮಲ್ಪೆ, ಸಂಜೀವ್ ಬಳ್ಕೂರು, ಕರುಣಾಕರ್ ಮಾಸ್ತರ್, ಗಣೇಶ್ ನೆರ್ಗಿ, ಯು.ಪರಮೇಶ್ವರ್, ಸುಕೇಶ್ ನಿಟ್ಟೂರು, ಹರೀಶ್ ಸಲ್ಯಾನ್, ವನಿತಾ ಅರುಣ್, ಶಶಿಕಲಾ ತೊಟ್ಟಂ, ಗಂಗೆ ಇತರರಿದ್ದರು.
ಎಂ.ದೇವದಾಸ್ ಸ್ಮರಣಾರ್ಥ ನುಡಿನಮನ
ಉಡುಪಿ: ದಲಿತರು ಸ್ವಾಭಿಮಾನದೊಂದಿಗೆ ಸ್ವಾವಲಂಬಿಗಳಾಗಬೇಕು. ಶಿಕ್ಞಣ, ಸಂಘಟನೆ, ಹೋರಾಟದ ತತ್ವ ಮೈಗೂಡಿಸಿಕೊಳ್ಳಬೇಕು. ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸರ್ವತ್ಯಾಗಕ್ಕೂ ಸಿದ್ಧರಿರಬೇಕು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಸಲಹೆ ನೀಡಿದರು.
ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ್ದ ಮಂಗಳೂರಿನ ಹಿರಿಯ ದಲಿತ ಮುಖಂಡ ಎಂ.ದೇವದಾಸ್ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಖರ ವಿಚಾರವಾದಿ
ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ್ ಬಳ್ಕೂರು ಮಾತಮಾಡಿ, ದಿಟ್ಟ ಹಾಗೂ ಪ್ರಖರ ವೈಚಾರಿಕತೆ, ಆಧುನಿಕ ದೃಷ್ಟಿಕೋನ ಹೊಂದಿದ್ದರು. ಅಂಬೇಡ್ಕರ್ ಹಾದಿಯಲ್ಲಿ ನಿಷ್ಠೆಯಿಂದ ದುಡಿದ ಕಡಲ ತೀರದ ಅಪರೂಪದ ವ್ಯಕ್ತಿಯಾಗಿದ್ದರು ಎಂದರು.
ದಲಿತ ಮುಖಂಡ ಕರುಣಾಕರ್ ಮಾಸ್ತರ್ ಮಾತನಾಡಿದರು. ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಯು.ಪರಮೇಶ್ವರ್, ದಲಿತ ಮುಖಂಡ ಹರೀಶ್ ಸಲ್ಯಾನ್ ನುಡಿನಮನ ಸಲ್ಲಿಸಿದರು.
ತೊಟ್ಟಂ, ಫಜೀಲ್, ಬಿ.ಎನ್. ಪ್ರಶಾಂತ್, ಸುಶೀಲ್ ಕೊಡವೂರು, ಯೊಗೀಶ್ ನೆರ್ಗಿ, ನಾರಾಯಣ ಚಿಟ್ಪಾಡಿ, ಶಿವಕುಮಾರ್ ಪರ್ಕಳ, ವನಿತಾ ಅರುಣ್, ಶಶಿಕಲಾ ತೊಟ್ಟಂ, ಗಂಗೆ, ಜಲಜಾ, ಸಂಧ್ಯಾ ತಿಲಕ್ರಾಜ್ ಇತರರಿದ್ದರು.
ಸುಕೇಶ್ ನಿಟ್ಟೂರು ಸ್ವಾಗತಿಸಿದರು. ಅಶೋಕ್ ಪುತ್ತೂರು ವಂದಿಸಿದರು.