ಪಡುಬಿದ್ರಿ ದೇವಳ ಉತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಪಂಜ ಭಾಸ್ಕರ ಭಟ್ ಮಾತನಾಡಿದರು. ಪ್ರಮುಖರಾದ ವೈ.ಎನ್.ರಾಮಚಂದ್ರ ರಾವ್, ಗುರುರಾಜ ಆಚಾರ್ಯ, ರಘುಪತಿ ಆಚಾರ್ಯ, ಹರಿ ನಾರಾಯಣ ರಾವ್, ಗುರಿಕಾರ ನಟರಾಜ ಪಿ.ಎಸ್. ಇದ್ದರು.
- ಪಂಜ ಭಾಸ್ಕರ ಭಟ್ ಹೇಳಿಕೆ
- ಪಡುಬಿದ್ರಿ ದೇವಳದಲ್ಲಿ ಧಾರ್ಮಿಕ ಸಭೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಎರಡು ದಿವ್ಯ ದೃಷ್ಟಿಯೆನಿಸಿರುವ ಒಡೆಯನ ಸನ್ನಿಧಾನ ಹಾಗೂ ಖಡ್ಗೇಶ್ವರಿ ಕ್ಷೇತ್ರಗಳು ಪಡುಬಿದ್ರಿಯಲ್ಲಿವೆ. ಇಲ್ಲಿನ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸಿದ ವಿಪ್ರ ಸಮಾಜದ ಎಲ್ಲರನ್ನೂ ಸನ್ಮಾನಿಸಲಾಗಿದೆ. ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸಲಾಗಿದೆ. ವನದುರ್ಗಾ ಟ್ರಸ್ಟ್ ಮೂಲಕ ಇನ್ನಷ್ಟು ಸಮಾಜಮುಖಿ ಕಾರ್ಯಗಳಾಗಲಿ ಎಂದು ಪಂಜ ಭಾಸ್ಕರ ಭಟ್ ಹೇಳಿದರು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ವರ್ಷಾವಧಿ ಮಹಾರಥೋತ್ಸವದ ಧಾರ್ಮಿಕ ಸಭೆ ಹಾಗೂ ಸಾಂಸತಿಕ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಗೌರವಾರ್ಪಣೆ:
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಪಡುಬಿದ್ರಿ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಕಾರಣೀಕರ್ತರಾದವರನ್ನು ಸನ್ಮಾನಿಸಲಾಯಿತು. ಯಕ್ಷಗುರು ರವೀಂದ್ರ ರಾವ್ ಪಿ.ಎಸ್. ಹಾಗೂ ಸಾಂಸತಿಕ ಕಾರ್ಯಕ್ರಮ ಪ್ರಾಯೋಜಕ ವನದುರ್ಗಾ ಟ್ರಸ್ಟ್ನ ಕೋಶಾಧಿಕಾರಿ ಸುರೇಶ್ ರಾವ್ ವೈ. ಅವರನ್ನು ಗೌರವಿಸಲಾಯಿತು.
ಗಣ್ಯರ ಉಪಸ್ಥಿತಿ:
ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಅರ್ಚಕರಾದ ಗುರುರಾಜ ಆಚಾರ್ಯ, ರಘುಪತಿ ಆಚಾರ್ಯ, ಪಾತ್ರಿ ಹರಿ ನಾರಾಯಣ ರಾವ್, ಗುರಿಕಾರ ನಟರಾಜ ಪಿ.ಎಸ್. ಉಪಸ್ಥಿತರಿದ್ದರು. ವನದುರ್ಗಾ ಟ್ರಸ್ಟ್ನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ಸ್ವಾಗತಿಸಿದರು. ರಜನೀಶ್ ಭಟ್ ವಂದಿಸಿದರು. ಸಮಾಜದ ಯುವ ಪ್ರತಿಭೆಗಳು ಪ್ರಸ್ತುತ ಪಡಿಸಿದ ದಕ್ಷಾಧ್ವರ, ಗಿರಿಜಾ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.